Sunday, September 20, 2026

BDA Apartments

ಹೊಸಬರ ‘ಓ’ಗೆ ಪವರ್ ಫುಲ್ ಹಾಡು ಹಾಡಿದ ಅಪ್ಪು BDA JK_Adv BDA Adv
Home Cinema ಹೊಸಬರ ‘ಓ’ಗೆ ಪವರ್ ಫುಲ್ ಹಾಡು ಹಾಡಿದ ಅಪ್ಪು

ಹೊಸಬರ ‘ಓ’ಗೆ ಪವರ್ ಫುಲ್ ಹಾಡು ಹಾಡಿದ ಅಪ್ಪು

ಬೆಂಗಳೂರು, ಜೂನ್ 18, 2020 (www.justkannada.in): ಹೊಸಬರೇ ನಿರ್ಮಿಸಿ, ನಟಿಸಿರುವ ‘ಓ’ ಎನ್ನುವ ಸಿನಿಮಾಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಧ್ವನಿ ನೀಡಿದ್ದಾರೆ.

ಹೌದು. ಹೊಸ ಪ್ರತಿಭೆಗಳಿಗೆ ಯಾವಾಗಲೂ ಸಾಥ್ ನೀಡುವ ಅಪ್ಪು ಇದೀಗ ಮತ್ತೊಂದು ಹೊಸ ತಂಡಕ್ಕಾಗಿ ಹಾಡು ಹಾಡಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಪಾರು’ ಧಾರವಾಹಿಯಲ್ಲಿ ಪ್ರೀತಂ ಪಾತ್ರ ಮಾಡುತ್ತಿರುವ ಸಿದ್ದು ಮೂಲಿಮನಿ ಈ ಸಿನಿಮಾದ ನಾಯಕ.

ಇದು ಅವರ ಮೊದಲ ಸಿನಿಮಾ ಎನ್ನುವುದು ವಿಶೇಷ. ಈ ಚಿತ್ರಕ್ಕೆ ಅಪ್ಪು ಧ್ವನಿ ನೀಡಿರುವುದು ಹೊಸ ಪ್ರತಿಭೆಗಳಿಗೆ ಮತ್ತಷ್ಟು ಹುಮ್ಮಸ್ಸು ತಂದುಕೊಟ್ಟಿದೆ.