Tuesday, August 18, 2026

BDA Apartments

Home Front Page ಪ್ರಧಾನಿ ಮೋದಿ ಅವರನ್ನ ಮತ್ತೆ ಹೊಗಳಿದ ‘ಕೈ’ ಶಾಸಕ..

ಪ್ರಧಾನಿ ಮೋದಿ ಅವರನ್ನ ಮತ್ತೆ ಹೊಗಳಿದ ‘ಕೈ’ ಶಾಸಕ..

ಬೆಂಗಳೂರು,ಜೂ,1,2019(www.justkannada.in): ಇತ್ತೀಚೆಗಷ್ಟೆ ತಮ್ಮ ಪಕ್ಷದವರೇ ಆದ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಪ್ರಧಾನಿ ನರೇಂದ್ರ ಮೋದಿ ಅವರನ್ನ ಹೊಗಳಿದ್ದ  ಮಾಜಿ ಸಚಿವ ರೋಷನ್ ಬೇಗ್ ಇದೀಗ ಮತ್ತೆ ಪ್ರಧಾನಿ ಮೋದಿ ಅವರನ್ನ ಗುಣಗಾನ ಮಾಡಿದ್ದಾರೆ.

ಟ್ವಿಟ್ಟರ್ ಮೂಲಕ ಪ್ರಧಾನಿ ಮೋದಿ ಸಂಪುಟಕ್ಕೆ ಶಹಬ್ಬಾಶ್ ಗಿರಿ ನೀಡಿರುವ ಕಾಂಗ್ರೆಸ್ ಶಾಸಕ ರೋಷನ್ ಬೇಗ್,  ಕೇಂದ್ರ ಸಚಿವ ಸಂಪುಟದಲ್ಲಿ ಜೈ ಶಂಕರ್ ಮತ್ತು ಹರ್ದೀಪ್ ಪುರಿ ಅವರನ್ನ ಸೇರಿಸಿಕೊಂಡಿದ್ದು ಖುಷಿ ತಂದಿದೆ.  ಸಚಿವ ಸಂಪುಟ ಒಳ್ಳೆಯ ಕೆಲಸ ಮಾಡುವ ವಿಶ್ವಾಸವಿದೆ ಎಂದು ಶುಭಾಶಯ ತಿಳಿಸಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಭರ್ಜರಿ ಜಯ ಗಳಿಸಿದ ಬಳಿಕ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಚಿವ ರೋಷನ್ ಬೇಗ್ ಮೋದಿಯನ್ನು ಹೊಗಳಿ ಟ್ವೀಟ್ ಮಾಡಿದ್ದರು. ಕೇಂದ್ರದಲ್ಲಿ ಬಹುಮತ ಪಡೆದದ್ದಕ್ಕೆ ಮೋದಿಗೆ ಶುಭಾಶಯ ಹೇಳಿದ್ದಲ್ಲದೆ “ಇದು ಜನರ ಮಾತು, ದೇಶದ ಪ್ರಗತಿಗಾಗಿ ಪ್ರಧಾನಿ ಕೆಲಸ ಮಾಡಲಿದ್ದಾರೆ ಎಂದು ನಾನು ಭಾವಿಸಿದ್ದೇನೆ ಎಂದಿದ್ದರು.

Key words: Congress MLA praises Modi again.

#Congress  #roshanbaig #praises #PMModi