Saturday, September 19, 2026

BDA Apartments

ಮೊಬೈಲ್’ನಿಂದ ಸುಶಾಂತ್ ಆತ್ಮಹತ್ಯೆ ರಹಸ್ಯ ಬಯಲು? BDA JK_Adv BDA Adv
Home Cinema ಮೊಬೈಲ್’ನಿಂದ ಸುಶಾಂತ್ ಆತ್ಮಹತ್ಯೆ ರಹಸ್ಯ ಬಯಲು?

ಮೊಬೈಲ್’ನಿಂದ ಸುಶಾಂತ್ ಆತ್ಮಹತ್ಯೆ ರಹಸ್ಯ ಬಯಲು?

ಮುಂಬೈ, ಜೂನ್ 15, 2020 (www.justkannada.in): ಬಾಲಿವುಡ್ ನಟ ಮೃತ ಸುಶಾಂತ್ ಸಿಂಗ್ ರಜಪೂತ್ ಅವರ ಮೊಬೈಲ್ ಅನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಮೃತದೇಹವಿದ್ದ ಸ್ಥಳದಲ್ಲಿ ಪರಿಶೀಲನೆ ನಡೆಸಿದ ಪೊಲೀಸರು ಅವರ ಆತ್ಮಹತ್ಯೆಯ ಕುರಿತಾಗಿ ತನಿಖೆ ಕೈಗೊಂಡಿದ್ದಾರೆ. ಮನೆಕೆಲಸದವರ ವಿಚಾರಣೆ ನಡೆಸಲಾಗಿದೆ.

ಮುಂಬೈನ ಬಾಂದ್ರಾದಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ಮನೆಯಲ್ಲಿ ಯಾವುದೇ ಡೆತ್ ನೋಟ್ ದೊರೆತಿಲ್ಲ. ಮನೆಯ ಕೆಲಸದವರ ವಿಚಾರಣೆ ನಡೆಸಲಾಗಿದೆ. ಮೊಬೈಲ್ ಆಧರಿಸಿ ಮಾಹಿತಿ ಕಲೆಹಾಕಲಾಗಿದೆ ಎನ್ನಲಾಗಿದೆ.