ಯುಎಇನಲ್ಲಿ ಐಪಿಎಲ್ ಟೂರ್ನಿ ನಡೆಸಲು ಬಿಸಿಸಿಐ ಪ್ಲಾನ್ !

ಮುಂಬೈ, ಜೂನ್ 15, 2020 (www.justkannada.in): ಯುಎಇನಲ್ಲಿ ಐಪಿಎಲ್ ಟೂರ್ನಿ ನಡೆಸಲು ಪ್ಲಾನ್ ಮಾಡಲಾಗಿದೆ.

ಶತಾಯಗತಾಯ ಈ ವರ್ಷ ಐಪಿಎಲ್ ಟಿ-20 ಟೂರ್ನಿ ನಡೆಸಲೇಬೇಕು ಎಂದು ಹಠ ಹಿಡಿದಂತಿರುವ ಬಿಸಿಸಿಐನಿಂದ ಈ ನಿಟ್ಟಿನಲ್ಲಿ ಎಲ್ಲಾ ಸಿದ್ಧತೆ ನಡೆಸಲಾಗಿದೆ.

ಭಾರತದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಾರದಿದ್ದರೆ ದುಬೈ, ಅಬುದಾಭಿ ಮತ್ತು ಶಾರ್ಜಾದಲ್ಲಿ ಅಂತರರಾಷ್ಟ್ರೀಯ ಕ್ರೀಡಾಂಗಣಗಳಿವೆ.  ಅಲ್ಲಿ ಪಂದ್ಯಾವಳಿ ನಡೆಸಲು ಪ್ಲಾನ್ ರೂಪಿಸಲಾಗುತ್ತಿದೆ.

ಈ ಕ್ರೀಡಾಂಗಣಗಳ ಸಮೀಪದಲ್ಲೇ ಆಟಗಾರರು ಉಳಿದುಕೊಳ್ಳಲು ಹೋಟೆಲ್ ಗಳು ಇವೆ. ಯುಎಇ ಕ್ರಿಕೆಟ್ ಮಂಡಳಿ ಆಟಗಾರರ ಸುರಕ್ಷತೆಗೆ ಎಲ್ಲಾ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್ – ಅಕ್ಟೋಬರ್ ನಲ್ಲಿ ಐಪಿಎಲ್ ನಡೆಸಲು ಬಿಸಿಸಿಐ ತಯಾರಿ ನಡೆಸಿದೆ.