Thursday, August 6, 2026

BDA Apartments

Home Front Page ರಾಜ್ಯಸಭೆಗೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಬಿ.ಎಲ್ ಸಂತೋಷ್ ಪಾತ್ರ: ಬಿಎಸ್ ವೈ ಸಿಎಂ ಆಗಲೂ ಅವರೇ ಕಾರಣ...

ರಾಜ್ಯಸಭೆಗೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಬಿ.ಎಲ್ ಸಂತೋಷ್ ಪಾತ್ರ: ಬಿಎಸ್ ವೈ ಸಿಎಂ ಆಗಲೂ ಅವರೇ ಕಾರಣ ಎಂದ್ರು ಸಚಿವ ಸಿ.ಟಿ ರವಿ…

ಬೆಂಗಳೂರು,ಜೂ,9,2020(www.justkannada.in):  ರಾಜ್ಯಸಭೆ ಚುನಾವಣೆಗೆ ಇಬ್ಬರ ಅಭ್ಯರ್ಥಿಗಳ ಆಯ್ಕೆಯಲ್ಲಿ ಬಿ.ಎಲ್ ಸಂತೋಷ್ ಪಾತ್ರವಿದೆ. ಬಿ.ಎಸ್ ಯಡಿಯೂರಪ್ಪ ಸಹ ಸಿಎಂ ಆಗಲು ಸಂತೋಷ್ ಕಾರಣ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ತಿಳಿಸಿದ್ದಾರೆ.BL Santosh - selection -candidates - Rajya Sabha-minister-CT Ravi.

ವಿಧಾನಸೌಧದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಸಿ.ಟಿ ರವಿ, ಬಿ. ಎಲ್ ಸಂತೋಷ್ ನಮ್ಮ ರಾಷ್ಟ್ರೀಯ ನಾಯಕರು. ಎಲ್ಲರೂ ಒಪ್ಪಿದ್ದಾರೆ. ಬಿಎಲ್ ಸಂತೋಷ್ ನಾಯಕತ್ವ ಒಪ್ಪಿಲ್ಲ ಎಂದು ಎಲ್ಲಾದರೂ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರಾ..? ಎಂದು ಪ್ರಶ್ನಿಸಿದರು.

ಕಾರ್ಯಕರ್ತರನ್ನ ಗುರುತಿಸಿ ಪಕ್ಷದ ಹೈಕಮಾಂಡ್ ರಾಜ್ಯಸಭೆ ಚುನಾವಣೆಗೆ ಟಿಕೆಟ್ ನೀಡಿದೆ. ಹೈಕಮಾಂಡ್ ನಿರ್ಧಾರಕ್ಕೆ ಎಲ್ಲರೂ ಒಪ್ಪಬೇಕು ಎಂದು ಸಚಿವ ಸಿ.ಟಿ ರವಿ ಹೇಳಿದರು.

Key words: BL Santosh – selection -candidates – Rajya Sabha-minister-CT Ravi.