Saturday, August 8, 2026

BDA Apartments

Home Front Page ಉಡುಪಿಯಲ್ಲೇ ಅತಿಹೆಚ್ಚು ಸೋಂಕಿತರು: ಒಂದು ತಿಂಗಳಲ್ಲಿ ಗ್ರೀನ್ ಜೋನ್ ಗೆ ತರುತ್ತೇವೆ- ವಿಶ್ವಾಸ ವ್ಯಕ್ತಪಡಿಸಿದ ಸಚಿವ...

ಉಡುಪಿಯಲ್ಲೇ ಅತಿಹೆಚ್ಚು ಸೋಂಕಿತರು: ಒಂದು ತಿಂಗಳಲ್ಲಿ ಗ್ರೀನ್ ಜೋನ್ ಗೆ ತರುತ್ತೇವೆ- ವಿಶ್ವಾಸ ವ್ಯಕ್ತಪಡಿಸಿದ ಸಚಿವ ಡಾ.ಕೆ.ಸುಧಾಕರ್…

ಉಡುಪಿ,ಜೂ,3,2020(www,justkannada.in):  ರಾಜ್ಯದಲ್ಲಿ ಕೊರೋನಾ ಸೋಂಕಿತರನ್ನು ಹೊಂದಿರುವ ಜಿಲ್ಲೆಗಳಲ್ಲಿ ಉಡುಪಿ ಮೊದಲ ಸ್ಥಾನದಲ್ಲಿದೆ. ಅತಿ ಹೆಚ್ಚು ಸೋಂಕಿತರು ಇಲ್ಲಿ ಇದ್ದು ಒಂದು ತಿಂಗಳಲ್ಲಿ ಉಡುಪಿಯನ್ನ ಗ್ರೀನ್ ಜೋನ್ ಗೆ ತರುತ್ತೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.udupi-corona-green-zone-month-minister-dr-k-sudhakar

ಉಡುಪಿಯಲ್ಲಿ ಇಂದು ಮಾಡಿದ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್, ಉಡುಪಿಯಲ್ಲಿ ಅತಿಹೆಚ್ಚು ಸೋಂಕಿತರು ಇದ್ದಾರೆ. ಆದರೆ ಶೇ.98ರಷ್ಟು ಸೋಂಕಿತರಿಗೆ ಲಕ್ಷಣಗಳೇ ಇಲ್ಲ. ಹೀಗಾಗಿ ಒಂದು ತಿಂಗಳಲ್ಲಿ ಉಡುಪಿಯನ್ನ ಗ್ರೀನ್ ಜೋನ್ ಗೆ ತರುತ್ತೇವೆ. ಇಲ್ಲಿ ವಾರದೊಳಗೆ ಇನ್ನೊಂದು ಲ್ಯಾಬ್ ತೆರೆಯುತ್ತೇವೆ ಎಂದು ತಿಳಿಸಿದರು.

ಕೊರೋನಾ ವೈರಸ್ ಸಾಮಾಜಿಕ ಪಿಡುಗು ಅಲ್ಲ. ಕೊರೋನಾಗಿಂತ ಸಾರ್ಸ್, ಎಬೋಲಾ ಮಾರಕವಾಗಿವೆ.ಜನರಲ್ಲಿರುವ ಕೊರೋನಾ ಬಗೆಗಿನ ಭಯ ದೂರವಾಗಬೇಕು. ರಾಜ್ಯದಲ್ಲಿ ಕೊರೋನಾ ಸೋಂಕಿತರು 10 ಲಕ್ಷವಾದರೂ ಕಟ್ಟೆಚ್ಚರ ವಹಿಸುತ್ತೇವೆ.  ಅಂತಹ ತಂತ್ರಜ್ಞಾನ ಸಿದ್ಧಪಡಿಸಿದ್ದೇವೆ ಎಂದು ಸುಧಾಕರ್ ಹೇಳಿದರು.

Key words: udupi- corona -Green Zone – month-  Minister -Dr K Sudhakar