Saturday, August 8, 2026

BDA Apartments

Home Front Page ಮೈಸೂರಿನಲ್ಲಿ ಹೆಚ್ಚಾದ ಕರೋನಾ ಆತಂಕ: ಇಬ್ಬರು ಮಹಿಳೆಯರಿಗೆ ಕೊರೋನಾ ಸೋಂಕು…?

ಮೈಸೂರಿನಲ್ಲಿ ಹೆಚ್ಚಾದ ಕರೋನಾ ಆತಂಕ: ಇಬ್ಬರು ಮಹಿಳೆಯರಿಗೆ ಕೊರೋನಾ ಸೋಂಕು…?

ಮೈಸೂರು,ಜೂ,3,2020(www.justkannada.in): ಸಾಂಸ್ಕೃತಿ ನಗರಿ ಮೈಸೂರಿನಲ್ಲಿ 90 ಮಂದಿ ಕರೋನಾ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆದ ಬಳಿಕ ಕಡಿಮೆಯಾಗಿದ್ದ ಕೊರೋನಾ ಸೋಂಕಿನ ಆತಂಕ ಇದೀಗ ಮತ್ತೆ ಹೆಚ್ಚಾಗಿದೆ.

ಮುಂಬೈ ಟ್ರಾವಲ್ ಹಿಸ್ಟರಿ ಹೊಂದಿದ ಮಹಿಳೆಗೆ ಕೊರೋನಾ ಸೋಂಕು ಇರುವ ಸಾದ್ಯತೆ ಇದ್ದು, ಹೀಗಾಗಿ ನಗರದ ರಾಮಕೃಷ್ಣ ನಗರ ಜಿ ಬ್ಲಾಕ್ ,7 ನೇ ಕ್ರಾಸ್ ಕಂಟೋನ್ಮೆಂಟ್ ಝೋನ್ ಎಂದು ಘೋಷಣೆ ಮಾಡಲಾಗಿದೆ. ಪೊಲೀಸರು, ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಬ್ಯಾರಿಕೇಡ್ ಅಳವಡಿಸಿ ಕಂಟೋನ್ಮೆಂಟ್ ಜೋನ್‌ ಮಾಡಿದ್ದಾರೆ.mysore-anxiety -corona –women- Containment Zone

ಮುಂಬೈ ಟ್ರಾವಲ್ ಹಿಸ್ಟರಿ ಹೊಂದಿದ ಮಹಿಳೆ ಮತ್ತು ಅವರ ಮಗಳಿಗೆ ಕೊರೋನಾ ಸೋಂಕು ದೃಢಪಟ್ಟಿರುವ ಸಾಧ್ಯತೆ ಇದೆ. ಗರ್ಭಿಣಿ ಮಹಿಳೆ ಹಾಗೂ ಇನ್ನೊಬ್ಬ ಮಹಿಳೆಗೆ ವಯಸ್ಸಾದ ಕಾರಣಕ್ಕೆ ಆರೋಗ್ಯ ಇಲಾಖೆ ಹೋಮ್ ಕ್ವಾರಂಟೈನ್ ಮಾಡಿದೆ. ಕೊರೋನಾ ಶಂಕಿತರನ್ನ ಕೋವಿಡ್ ಆಸ್ಪತ್ರೆಗೆ ರವಾನಿಸಲಾಗಿದೆ.

Key words: mysore-anxiety -corona –women- Containment Zone