Thursday, July 30, 2026

BDA Apartments

Home Front Page ಸರಕಾರ ಸುಭದ್ರ, ನಮ್ಮಲ್ಲಿ ಲಕ್ಷ್ಮಣ ರೇಖೆ ದಾಟುವವರು ಯಾರೂ ಇಲ್ಲ: ಡಿಸಿಎಂ ಅಶ್ವಥ್ ನಾರಾಯಣ್

ಸರಕಾರ ಸುಭದ್ರ, ನಮ್ಮಲ್ಲಿ ಲಕ್ಷ್ಮಣ ರೇಖೆ ದಾಟುವವರು ಯಾರೂ ಇಲ್ಲ: ಡಿಸಿಎಂ ಅಶ್ವಥ್ ನಾರಾಯಣ್

ಮೈಸೂರು, ಮೇ 31, 2020 (www.justkannada.in): ಆಂತರಿಕ ಕಚ್ಚಾಟದಿಂದ ಯಾವ ಸರ್ಕಾರಕ್ಕೆ ತೊಂದರೆಯಾಗಿದೆ ಎಂಬುದು ಗೊತ್ತಿದೆ. ನಮ್ಮಲ್ಲಿ ಲಕ್ಷ್ಮಣ ರೇಖೆ ದಾಟುವವರು ಯಾರು ಇಲ್ಲ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಹೇಳಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ಆಂತರಿಕೆ ಕಚ್ಚಾಟದಿಂದ ಸರ್ಕಾರ ಬೀಳುತ್ತೆ ಎಂಬ ಸಿದ್ದರಾಮಯ್ಯ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದರು. ಆಂತರಿಕ ಕಚ್ಚಾಟ ಏನು ಅಂತ ಅವರಿಗೆ ಗೊತ್ತಿದೆ. ನಮ್ಮಲ್ಲಿ ಯಾವುದೇ ಕಿತ್ತಾಟ ಇಲ್ಲ, ಸರ್ಕಾರ ಸುಭದ್ರವಾಗಿದೆ, ಮೂರುವರೆ ವರ್ಷ ಸ್ಥಿರವಾಗಿರುತ್ತೆ ಎಂದು ಹೇಳಿದರು.

ಬಿಜೆಪಿ ಶಾಸಕರ ಪ್ರತ್ಯೇಕ ಸಭೆ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ ಅವರು, ಈ ಸಭೆ ಮಾಡಿದ್ದ ತಪ್ಪು. ಕೆಲವರಿಗೆ ಸಣ್ಣ ಪುಟ್ಟ ಅಪೇಕ್ಷೆ ಇರುತ್ತೆ. ಅಪೇಕ್ಷೆ ಇರುವುದು ತಪ್ಪಲ್ಲ. ಆದರೆ ಅದನ್ನ ಕೇಳುವುದು ಸರಿಯಾಗಿರಬೇಕು ಎಂದು ಅಶ್ವಥ್ ನಾರಾಯಣ್ ಹೇಳಿದರು.