ಲಾಕ್‌ಡೌನ್ ನಡುವೆ ಕಾಡಿನಿಂದ ನಾಡಿಗೆ ಬಂದ ಚಿರತೆ: ಸಾಮಾಜಿಕ ಅಂತರ ಮರೆತು ನೋಡಲು ಮುಗಿಬಿದ್ದ ಜನತೆ

ಮೈಸೂರು, ಮೇ 22, 2020 (www.justkannada.in): ಲಾಕ್‌ಡೌನ್ ನಡುವೆ ಕಾಡಿನಿಂದ ನಾಡಿಗೆ ಬಂದ ಚಿರತೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿದೆ.
ಮೈಸೂರು ಜಿಲ್ಲೆ ಟಿ ನರಸೀಪುರ ತಾಲ್ಲೂಕಿನ ಗ್ರಾಮ ಕುರುಬಾಳನಹುಂಡಿ ಗ್ರಾಮದ ಬಳಿ ಸಿಕ್ಕಿರುವ ಚಿರತೆ. ಕಳೆದ ಒಂದು ತಿಂಗಳಿಂದ ಗ್ರಾಮದ ಸುತ್ತಮುತ್ತ ಈ ಚಿರತೆ ಓಡಾಡುತ್ತಿತ್ತು.

ಹಲವು ದಿನಗಳಿಂದ ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸುತ್ತಿತ್ತು. ಹಸು,ನಾಯಿ,ಕುರಿ ಮೇಲೆ ದಾಳಿ ನಡೆಸುತ್ತಿದ್ದ ಚಿರತೆ ಬಂಧಿಸಲು ಅರಣ್ಯ ಇಲಾಖೆಗೆ ಗ್ರಾಮಸ್ಥರು ದೂರು ನೀಡಿದ್ದರು. ರೈತ ರಾಜು ಎಂಬವವರ ಜಮೀನಿನಲ್ಲಿ ಬೋನು ಇರಿಸಿದ್ದ ಅರಣ್ಯ ಇಲಾಖೆ ಬಲೆಗೆ ಚಿರತೆ ಬಿದ್ದಿದೆ.

ಚಿರತೆ ನೋಡುವ ಭರದಲ್ಲಿ ಕರೊನಾ ಮರೆತ ಜನ: ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದ ಚಿರತೆ ನೋಡಲು ನೂರಾರು ಸಂಖ್ಯೆಯಲ್ಲಿ ಜನರು ಮುಗಿಬಿದ್ದರು.

ತಿ.ನರಸೀಪುರ ತಾಲೂಕಿನ ಗ್ರಾಮ ಕುರುಬಾಳನಹುಂಡಿ ಗ್ರಾಮದ ಬಳಿ ಸಿಕ್ಕಿರುವ ಚಿರತೆ. ಕಳೆದ ಒಂದು ತಿಂಗಳಿಂದ ಗ್ರಾಮದ ಸುತ್ತಮುತ್ತ ಚಿರತೆ ಓಡಾಡುತ್ತಿತ್ತು. ಹಲವು ದಿನಗಳಿಂದ ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡಿತ್ತು.