ಮೈಸೂರಿನಲ್ಲಿ ಮಾದರಿಯಾಗಬೇಕಿದ್ದ ಸಚಿವರಿಂದಲೇ ಲಾಕ್ ಡೌನ್ ಮಾರ್ಗಸೂಚಿ ಉಲ್ಲಂಘನೆ

ಮೈಸೂರು, ಮೇ 22, 2020 (www.justkannada.in): ಮೈಸೂರಿನಲ್ಲಿ ಮಾದರಿಯಾಗಬೇಕಿದ್ದ ಸಚಿವರಿಂದಲೇ ಲಾಕ್ ಡೌನ್ ಮಾರ್ಗಸೂಚಿ ಉಲ್ಲಂಘನೆಯಾಗಿದೆ.

ಮೈಸೂರು ಉಸ್ತುವಾರಿ ಸಚಿವರ ಕಾರ್ಯಕ್ರಮದ ಸಾಮಾಜಿಕ ಅಂತರ ಇರಲಿಲ್ಲ. ರಸ್ತೆ ಕಾಮಗಾರಿ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ರಾಜಕೀಯ ಮುಖಂಡರೇ ಗುಂಪು ಸೇರಿದ್ದರು.

ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ಶಾಸಕ ನಾಗೇಂದ್ರ ಭಾಗಿಯಾಗಿದ್ದ ಕಾರ್ಯಕ್ರಮ ಇದಕ್ಕೆ ಸಾಕ್ಷಿಯಾಗಿತ್ತು. ಮೈಸೂರಿನ ಹೆಬ್ಬಾಳದ ಅಭಿಷೇಕ್ ವೃತ್ತದಲ್ಲಿ ಗುದ್ದಲಿ ಪೂಜೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ: ಚಾಮರಾಜ ಕ್ಷೇತ್ರದ ರಸ್ತೆ ಕಾಮಗಾರಿಗೆ ಉಸ್ತುವಾರಿ ಸಚಿವ ಸೋಮಶೇಖರ್ ಚಾಲನೆ ನೀಡಿದರು. ಮೈಸೂರಿನ ಮಾದೇಗೌಡ ವೃತ್ತದಲ್ಲಿ ಗುದ್ದಲಿ ಪೂಜೆ ನೆರವೇರಿಸಲಾಯಿತು.

ಸುಮಾರು 5 ಕೋಟಿ ಅಂದಾಜು ವೆಚ್ಚದ ಕಾಮಗಾರಿ. 3.15ಕಿ.ಮೀ ಉದ್ದದ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಯಿತು. ಶಾಸಕ ಎಲ್ ನಾಗೇಂದ್ರ ಸಮ್ಮುಖದಲ್ಲಿ‌ ನಡೆದ ಗುದ್ದಲಿ ಪೂಜೆ ಕಾರ್ಯ ನಡೆಯಿತು. ಕಾರ್ಯಕ್ರಮದಲ್ಲಿ ಸ್ಥಳೀಯ ಪಾಲಿಕೆ ಮುಖಂಡರು, ನಗರ ಬಿಜೆಪಿ ಮುಖಂಡರು,ಅಧಿಕಾರಿಗಳು ಭಾಗಿಯಾಗಿದ್ದರು.