Tuesday, September 29, 2026

BDA Apartments

ಮೈಸೂರಿನಿಂದ ತಮ್ಮ ರಾಜ್ಯಗಳಿಗೆ ಹೊರಟ ಬಿಹಾರ, ಜಾರ್ಖಂಡ್ ಮೂಲದ ಕಾರ್ಮಿಕರು BDA JK...
Home Front Page ಮೈಸೂರಿನಿಂದ ತಮ್ಮ ರಾಜ್ಯಗಳಿಗೆ ಹೊರಟ ಬಿಹಾರ, ಜಾರ್ಖಂಡ್ ಮೂಲದ ಕಾರ್ಮಿಕರು

ಮೈಸೂರಿನಿಂದ ತಮ್ಮ ರಾಜ್ಯಗಳಿಗೆ ಹೊರಟ ಬಿಹಾರ, ಜಾರ್ಖಂಡ್ ಮೂಲದ ಕಾರ್ಮಿಕರು

ಮೈಸೂರು, ಮೇ 20, 2020 (www.justkannada.in): ಕರೊನಾ ಲಾಕ್ ಡೌನ್ ಎಫೆಕ್ಟ್’ನಿಂದಾಗಿ ಮೈಸೂರಿನಿಂದ ತವರಿನತ್ತ ವಲಸೆ ಕಾರ್ಮಿಕರು ಹೊರಟರು.

ತಮ್ಮ ತಮ್ಮ ರಾಜ್ಯಗಳಿಗೆ ತೆರಳಿದ 150 ಕ್ಕೂ ಹೆಚ್ಚು ಕಾರ್ಮಿಕರನ್ನು ನಗರದ ಬನ್ನಿಮಂಟಪದ ಮೈದಾನದಿಂದ ಬಸ್ ನಲ್ಲಿ ಬಿಳ್ಕೊಡಲಾಯಿತು.

4 ಬಸ್ ಗಳಲ್ಲಿ ಕಾರ್ಮಿಕರನ್ನು ಕಳುಹಿಸುವ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲೆಯ ವಿವಿಧೆಡೆ ಕೆಲಸ ಮಾಡುತ್ತಿದ್ದ ವಲಸೆ ಕಾರ್ಮಿಕರು ಹಾಗೂ ಜಾರ್ಖಂಡ್ ಹಾಗೂ ಬಿಹಾರ ಮೂಲದ ವಲಸೆ ಕಾರ್ಮಿಕರು ತಮ್ಮ ರಾಜ್ಯಗಳತ್ತ ಹೊರಟರು.

ಮೈಸೂರಿನಿಂದ ಬೆಂಗಳೂರಿಗೆ ತೆರಳಿ ಅಲ್ಲಿಂದ ತಮ್ಮ ತಮ್ಮ ರಾಜ್ಯಗಳಿಗೆ ತೆರಳಲಿರುವ ವಲಸೆ ಕಾರ್ಮಿಕರನ್ನು ಕಡ್ಡಾಯವಾಗಿ ಆರೋಗ್ಯ ತಪಾಸಣೆ ನಡೆಸಿದ ಬಳಿಕವೇ ಕಳುಹಿಸುವ ವ್ಯವಸ್ಥೆ ಮಾಡಲಾಯಿತು. ಥರ್ಮಲ್ ಸ್ಕ್ರೀನಿಂಗ್ ಮೂಲಕ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಲಾಯಿತು.