Saturday, September 19, 2026

BDA Apartments

ಹಣ ದುಪ್ಪಟ್ಟು ಮಾಡುವುದಾಗಿ ನಂಬಿಸಿ ಕೋಟ್ಯಾಂತರ ರೂ ದೋಚಿ ವ್ಯಕ್ತಿ ಪರಾರಿ… BDA...
Home Crime ಹಣ ದುಪ್ಪಟ್ಟು ಮಾಡುವುದಾಗಿ ನಂಬಿಸಿ ಕೋಟ್ಯಾಂತರ ರೂ ದೋಚಿ ವ್ಯಕ್ತಿ ಪರಾರಿ…

ಹಣ ದುಪ್ಪಟ್ಟು ಮಾಡುವುದಾಗಿ ನಂಬಿಸಿ ಕೋಟ್ಯಾಂತರ ರೂ ದೋಚಿ ವ್ಯಕ್ತಿ ಪರಾರಿ…

ಬೆಂಗಳೂರು,ಮೇ,30,2019(www.justlkannada.in): ವ್ಯಕ್ತಿಯೋರ್ವ  ಹಣ ದುಪ್ಪಟ್ಟು ಮಾಡುವುದಾಗಿ ಜನರನ್ನ ನಂಬಿಸಿ ಕೋಟ್ಯಾಂತರ  ರೂಪಾಯಿ ಸಂಗ್ರಹಿಸಿ ಬಳಿಕ ಜನರಿಗೆ ಟೋಪಿ ಹಾಕಿ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಟಿಸಿ ಪಾಳ್ಯ ಜನರೇ ಮೋಸ ಹೋಗಿರುವುದು. ಮಂಜುನಾಥ್ ಎಂಬಾತನೇ ಈ ರೀತಿ ವಂಚನೆ ಮಾಡಿರುವುದು. ಈತ ಹಣ ದುಪ್ಪಟ್ಟು ಮಾಡುವುದಾಗಿ ಟಿಸಿ ಪಾಳ್ಯದ ಜನರನ್ನ ನಂಬಿಸಿದ್ದಾನೆ. ಮೊದಲು ಕಡಿಮೆ ಹಣ ಪಡೆದು ದುಪ್ಪಟ್ಟು ಹಣ ನೀಡುತ್ತಿದ್ದ ಮಂಜುನಾಥ್ ನಂತರ ದೊಡ್ಡ ಮೊತ್ತದ ಹಣ ಪಡೆದು ಕೋಟ್ಯಾಂತರ ರೂಪಾಯಿ ಸಂಗ್ರಹಿಸಿ ಇದೀಗ ಪರಾರಿಯಾಗಿದ್ದಾನೆ.

ಈ ಕುರಿತು ಆತನ ಹೆಂಡತಿಗೆ ತಿಳಿದಿದ್ದು ಪತ್ನಿ ಮೈಕೋಲೇಔಟ್ ಪೊಲೀಸ್ ಠಾಣೆಗೆ ನಾಪತ್ತೆ ದೂರು ದಾಖಲಿಸಿದ್ದಾರೆ. ಹಣ ವಂಚನೆ ಆರೋಪದಲ್ಲಿ ಟಿಸಿ ಪಾಳ್ಯ ಜನರು ಕೆ.ಆರ್ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಮಂಜುನಾಥ್ ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Key words: A man who has been robbed of a huge amount of money from people.

#crimenews #bangalore #police