Sunday, August 23, 2026

BDA Apartments

Home Front Page ಹಳಿ ದಾಟುತ್ತಿದ್ದವರಿಗೆ ವಲಸೆ ಕಾರ್ಮಿಕರಿಗೆ ಯಮನಾಗಿ ಬಂದ ಗೂಡ್ಸ್ ರೈಲು: 16 ಮಂದಿ ಸಾವು

ಹಳಿ ದಾಟುತ್ತಿದ್ದವರಿಗೆ ವಲಸೆ ಕಾರ್ಮಿಕರಿಗೆ ಯಮನಾಗಿ ಬಂದ ಗೂಡ್ಸ್ ರೈಲು: 16 ಮಂದಿ ಸಾವು

ಔರಂಗಾಬಾದ್(ಮಹಾರಾಷ್ಟ್ರ), ಮೇ 8, 2020 (www.justkannada.in): ಹಳಿ ದಾಟುತ್ತಿದ್ದ ವಲಸೆ ಕಾರ್ಮಿಕರಿಗೆ ಗೂಡ್ಸ್ ರೈಲು ಡಿಕ್ಕಿ ಹೊಡದು 16 ಮಂದಿ ಸಾವಿಗೀಡಾದ ದುರ್ಘಟನೆ ಔರಂಗಾಬಾದ್ ನಗರದಲ್ಲಿ ಸಂಭವಿಸಿದೆ.

ಭೀಕರ ದುರ್ಘಟನೆಯಲ್ಲಿ ಕೆಲವರು ತೀವ್ರ ಗಾಯಗೊಂಡಿದ್ದಾರೆ. ಗಾಯಾಳುಗಳ ಸ್ಥಿತಿ ಶೋಚನೀಯವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ. ಶೌತ್ ಸೆಂಟ್ರಲ್ ರೈಲ್ವೆಯ ನಂದೀಡ್ ವಲಯದ ಜಲ್ನಾ ಮತ್ತು ಔರಂಗಾಬಾದ್ ರೈಲ್ವೆ ನಿಲ್ದಾಣಗಳ ನಡುವಣ ಕರ್ಮಡ್ ರೈಲ್ವೆ ನಿಲ್ದಾಣದ ಬಳಿ ಈ ಘಟನೆ ನಡೆದಿದೆ.

ಛತ್ತೀಸ್ಗಢದ ವಲಸೆ ಕಾರ್ಮಿಕರು ರೈಲು ಹಳಿ ದಾಟುತ್ತಿದ್ದಾಗ ಜಲ್ನಾದಿಂದ ಔರಂಗಾಬಾದ್ಗೆ ತೆರಳುತ್ತಿದ್ದ ಗೂಡ್ಸ್ ರೈಲು ಡಿಕ್ಕಿ ಹೊಡೆಯಿತು ದುರ್ಘಟನೆಯಲ್ಲಿ 16 ಕೂಲಿ ಕಾರ್ಮಿಕರು ಮೃತಪಟ್ಟು ಕೆಲವರು ಗಾಯಗೊಂಡಿದ್ದಾರೆ. ಇಬ್ಬರು ಯಾವುದೇ ಗಾಯಗಳಿಲ್ಲದೇ ಅಪಾಯದಿಂದ ಪಾರಾಗಿದ್ದಾರೆ.