Friday, August 14, 2026

BDA Apartments

Home Front Page ನಾಳೆಯಿಂದ ರಾಜ್ಯದಲ್ಲಿ ಅಂತರ್ಜಲ ಯೋಜನೆ  ಚಾಲನೆ: ಸಚಿವ ಕೆ.ಎಸ್.ಈಶ್ವರಪ್ಪ

ನಾಳೆಯಿಂದ ರಾಜ್ಯದಲ್ಲಿ ಅಂತರ್ಜಲ ಯೋಜನೆ  ಚಾಲನೆ: ಸಚಿವ ಕೆ.ಎಸ್.ಈಶ್ವರಪ್ಪ

ಬೆಂಗಳೂರು, ಮೇ 05, 2020 (www.justkannada.in): ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ  ನರೇಗಾ ಮುಖಾಂತರ

273 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ  ಆರಂಭದಲ್ಲಿ ಶಿವಮೊಗ್ಗದಲ್ಲಿ ಪೈಲಟ್ ಯೋಜನೆಗೆ ಚಾಲನೆ  ನೀಡಲಾಗುತ್ತದೆ. ಆರ್ಟ್ ಆಫ್ ಲೀವಿಂಗ್ ರವರ ಸಹಭಾಗಿತ್ವದಲ್ಲಿ ಯೋಜನೆ ಅನುಷ್ಠಾನಕ್ಕೆ ಚಾಲನೆ. ಈ ಯೋಜನೆಯು ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ. ರಾಜ್ಯದ ಸಮಗ್ರ ಅಂತರ್ ಜಲ ಚೇತನಕ್ಕೆ ಇದು ಸಹಕಾರಿಯಾಗಲಿದೆ.

ಯಾದಗಿರಿ, ಬಳ್ಳಾರಿ, ಉತ್ತರ ಕನ್ನಡ,ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಕ್ರೀಯಾ ಯೋಜನೆ ಹಾಕಿ 8-10 ದಿನದಲ್ಲಿ ಪ್ರಾರಂಭ ಮಾಡ್ತೀವಿ. ಜೂನ್ ವೇಳೆ 9 ಜಿಲ್ಲೆಯಲ್ಲಿ ಈ ಯೋಜನೆ ಪ್ರಾರಂಭ ಆಗುತ್ತೆ. ಗ್ರಾಮ ಪಂಚಾಯತ್ ಚುನಾವಣೆ ಮುಂದೂಡುವ ಬಗ್ಗೆ ಆಯೋಗಕ್ಕೆ ಪತ್ರ ಬರೆದಿದ್ದೇವೆ ಎಂದು ಸಚಿವ ಕೆಎಸ್ ಈಶ್ವರಪ್ಪ ತಿಳಿಸಿದ್ದಾರೆ.

ಈಗ ಆಡಾಳಿತಾಧಿಕಾರಿ ನೇಮಕವೊ ಅಥವಾ ಆಡಳಿತ ಸಮಿತಿ ರಚಿಸಬೇಕೊ ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿದೆ. ಇಂದು  ರಾಜ್ಯದ ಗ್ರಾಮ ಪಂಚಾಯತ್ ಗಳ ಸಾರ್ವತ್ರಿಕ ಚುನಾವಣೆಯು ಮೇ ತಿಂಗಳಲ್ಲಿ  ಚುನಾವಣೆ ನಡೆಯಬೇಕಿತ್ತು.  ಕೊರೊನ ಮಹಾಮಾರಿಯ ತುರ್ತು ಪರಿಸ್ಥಿತಿಯ ಕಾರಣ  ಚುನಾವಣೆ ಮುಂದಕ್ಕೆ ಹಾಕಲು ಈಗಾಗಲೇ ಚುನಾವಣೆ ಆಯೋಗಕ್ಕೆ ಪತ್ರ ಬರೆಯಲಾಗಿದೆ, ಆ ಮಧ್ಯಂತರ ಅವಧಿಗೆ ಆಡಳಿತ ಸಮಿತಿ ಅಥವಾ ಆಡಳಿತಾಧಿಕಾರಿ ನೇಮಿಸುವ ಕುರಿತು ಮಾನ್ಯ ಮುಖ್ಯಮಂತ್ರಿಗಳ ನಿರ್ದೇಶನದಂತೆ   ಇಂದು ನನ್ನ ನೇತೃತ್ವದಲ್ಲಿ  ಮಾನ್ಯ ಉಪಮುಖ್ಯಮಂತ್ರಿಗಳಾದ  ಶ್ರೀ ಗೋವಿಂದ ಕಾರಜೋಳ, ಶ್ರೀ ಲಕ್ಷ್ಮಣ ಸವದಿ, ಬೃಹತ್ ಕೈಗಾರಿಕೆ ಸಚಿವರಾದ ಶ್ರೀ ಜಗದೀಶ್  ಶೆಟ್ಟರ್. ಮುಜರಾಯಿ ಸಚಿವರಾದ

ಶ್ರೀ  ಕೊಟ ಶ್ರೀನಿವಾಸ ಪೂಜಾರಿ,  ಕಾನೂನು ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತಿಯಲ್ಲಿ ಸಭೆ ನಡೆಸಿ ಚರ್ಚಿಸಲಾಯಿತು. ಚರ್ಚೆಯ ಸಮಗ್ರ ವಿವರಗಳನ್ನು  ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯಗೆ ತಿರುಗೇಟು.

ಮದ್ಯ ಮಾರಾಟ ಆತುರದ ನಿರ್ಧಾರ ಎಂದು  ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿದ್ದ ಸಿದ್ದರಾಮಯ್ಯಗೆ ಈಶ್ವರಪ್ಪ ತಿರುಗೇಟು,   ಮದ್ಯ ಮಾರಾಟ ಮಾಡಿ ಎಂದು ಇವರೇ ಸಲಹೆ ನೀಡಿದ್ರು.. ಈಗ ಪೂರ್ವ ತಯಾರಿ ಮಾಡಿಲ್ಲ ಎನ್ನುತ್ತಿದ್ದಾರೆ ..

ಪೂರ್ವ ತಯಾರಿ ಎಂದ್ರೆ ಏನು ?   ಕುಡುಕರ ಬಾಯಿಗೆ ಬೀಗ ಹಾಕಿ, ಮದ್ಯವನ್ನು ಅವರ ಬಾಯಿಗೆ ಹಾಕಬೇಕಿತ್ತಾ ..

ನನಗೆ ಅರ್ಥ ಆಗ್ತಿಲ್ಲ ಸಿದ್ದರಾಮಯ್ಯರ ಹೇಳಿಕೆ. ಕುಡುಕರಿಗೆ ಶಿಸ್ತು ಪಾಲನೆ ಮಾಡಿ ಅಂದ್ರೆ ಮಾಡ್ತಾರೆಯೇ ..  ಕುಡುಕರು ಹೇಗೆ ಇರಬೇಕು ಎಂದು ಸಿದ್ದರಾಮಯ್ಯ ನೇತೃತ್ವದಲ್ಲಿ ಒಂದು ಸಮಿತಿ ಮಾಡಿದ್ರೆ ಉತ್ತಮ ಸಿದ್ದರಾಮಯ್ಯರು ಹೇಳಲಿ, ಸಲಹೆ ನೀಡಲಿ ಅವರು ಹೇಳಿದಂತೆ ನಾವು ಮಾಡ್ತೇವೆ ಎಂದು ಈಶ್ವರಪ್ಪ ತಿಳಿಸಿದ್ದಾರೆ.

ಡಿ.ಕೆ.ಶಿವಕುಮಾರ್ ಗೂ ಟಾಂಗ್!

ಕಾರ್ಮಿಕರನ್ನು ಅವರವರ ಊರಿಗೆ ಕಳಿಸುವಲ್ಲಿ ಸರ್ಕಾರ ಎಡವಿದೆ ಎನ್ನುವ ಪ್ರತಿಪಕ್ಷಗಳ ಟೀಕೆಗೆ ಈಶ್ವರಪ್ಪ ಗರಂ … ಡಿಕೆ ಶಿವಕುಮಾರ್ ಗೆ ಕಣ್ಣು ಕಾಣಲ್ವಾ ..  ಅವರು ಕಣ್ಣಿದ್ದು ಕುರುಡರಾಗಿದ್ದಾರೆ  ದೇಶದಲ್ಲಿ ಕರೋನಾ ಕಂಟ್ರೋಲ್ ಉತ್ತಮವಾಗಿ ಮಾಡ್ತಿರೋದೆ ಕರ್ನಾಟಕ  ಅದಕ್ಕೆ ಜನರು ನಮ್ಮನ್ನು ಪ್ರಶಂಸಿಸುತ್ತಿದ್ದಾರೆ  ಆದ್ರೆ ಸಿದ್ದರಾಮಯ್ಯಮತ್ತು ಡಿಕೆಶಿ ಪೈಪೋಟಿಗೆ ಬಿದ್ದು ಮಾತಾಡ್ತಾ ಇದ್ದಾರೆ  ಡಿಕೆ ಶಿವಕುಮಾರ್ ಸೋನಿಯಾ ಗಾಂಧಿ ಮೆಚ್ಚಿಸೋಕೆ ಮಾಡ್ತಿದ್ದಾರೆ  ದೇಶದಲ್ಲಿ ಕಾಂಗ್ರೆಸ್ ಪಕ್ಷವೊಂದು ಇದೆ ಎಂದು ತೋರಿಸವ ಪ್ರಯತ್ನ ಅಷ್ಟೇ ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ಪೈಪೋಟಿ ಶುರುವಾಗಿದೆ  ಎಂದು ತಿಳಿಸಿದರು.