Sunday, August 23, 2026

BDA Apartments

Home Front Page ಮದ್ಯದಂಗಡಿ ಮುಂದೆ ಭಾರಿ ಕ್ಯೂ: ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ‘ಕುಡುಕರ ಶಿಸ್ತು’!

ಮದ್ಯದಂಗಡಿ ಮುಂದೆ ಭಾರಿ ಕ್ಯೂ: ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ‘ಕುಡುಕರ ಶಿಸ್ತು’!

ಮೈಸೂರು, ಮೇ 04, 2020 (www.justkannada.in): ಮದ್ಯದಂಗಡಿ ತೆರೆಯಲು ಅವಕಾಶ ಮಾಡಿಕೊಟ್ಟ ಕಾರಣ ಮದ್ಯ ಪ್ರಿಯರು ಭಾರಿ ಖುಷಿಯಲ್ಲಿದ್ದಾರೆ. ಮೈಸೂರು ಸೇರಿದಂತೆ ಎಲ್ಲ ಮದ್ಯದಂಗಡಿಗಳಲ್ಲಿ ಭಾರಿ ಕ್ಯೂ ಕಂಡು ಬರುತ್ತಿದೆ.

ಇಂದು ಬೆಳ್ಳಂಬೆಳಗ್ಗೆಯೇ ಮದ್ಯದಂಗಡಿ ಎದುರು ಹಾಜರಾದ ಅವರು ಸಾಮಾಜಿಕ ಅಂತರ ಕಾಯ್ದುಕೊಂಡೇ ಮದ್ಯ ಖರೀದಿಗೆ ಸರದಿ ನಿಂತ ದೃಶ್ಯಗಳು ಬಹುತೇಕ ಕಡೆಗಳಲ್ಲಿ ಕಂಡುಬಂದವು.

ಸರ್ಕಾರದ ಕ್ರಮದ ಬಗ್ಗೆ ಅನೇಕ ಟೀಕೆಗಳೂ ವ್ಯಕ್ತವಾಗಿವೆಸರ್ಕಾರ ತೀಮಾರ್ನ ಘೋಷಿಸಿದ ಬೆನ್ನಲ್ಲೇ ಬೆಂಗಳೂರಿನಲ್ಲಿ ವೈನ್ ಶಾಪ್ ಎದುರು ಕಿ.ಮೀ. ಉದ್ದ ಕ್ಯೂ ಏರ್ಪಟ್ಟ ವಿಡಿಯೋ ಕೂಡ ಭಾನುವಾರ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿತ್ತು.

ಕೆಂಪು ವಲಯ ಮೈಸೂರಿನಲ್ಲೂ ಇಂದಿನಿಂದ ಮದ್ಯ ಮಾರಾಟ ಆರಂಭವಾಗಿದೆ. ಕೆಲವು ಕಡೆ ಸಾಮಾಜಿಕ ಅಂತರ ಪಾಲಿಸಬೇಕೆಂಬ ನಿಯಮದ ಬಗ್ಗೆಯೂ ಅವರ ಗಮನಹರಿಯಲಿಲ್ಲ!