Sunday, August 23, 2026

BDA Apartments

Home Front Page ಕೋವಿಡ್ 19 ಹಿನ್ನೆಲೆ : ಹಲ್ಲೆಕೋರರ ಶಿಕ್ಷಿಸುವ ರಾಜ್ಯ ಸರಕಾರದ ಸುಗ್ರೀವಾಜ್ಞೆಗೆ ಕ್ಷಣಗಣನೆ. 

ಕೋವಿಡ್ 19 ಹಿನ್ನೆಲೆ : ಹಲ್ಲೆಕೋರರ ಶಿಕ್ಷಿಸುವ ರಾಜ್ಯ ಸರಕಾರದ ಸುಗ್ರೀವಾಜ್ಞೆಗೆ ಕ್ಷಣಗಣನೆ. 

 

ಮೈಸೂರು, ಏ.21, 2020 : (www.justkannada.in news) : ರಾಜ್ಯದಲ್ಲಿ ಕೊರೋನಾ ಶಂಕಿತರ ಚಿಕಿತ್ಸೆಗೆಂದು ಹೋದಾಗ ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆಗಳಾಗುತ್ತಿರುವ ಹಿನ್ನೆಲೆಯಲ್ಲಿ ಹಲ್ಲೆಕೋರರ ಶಿಕ್ಷಿಸಲು ಸರಕಾರ ಸುಗ್ರೀವಾಜ್ಞೆ ಹೊರಡಿಸಲಿದೆ.

ಕೇರಳ ಮತ್ತು ಉತ್ತರ ಪ್ರದೇಶದ ಕಾನೂನಿನಂತೆ ಹಲ್ಲೆ ನಡೆಸಿದವರ ಮೇಲೆ ಕಠಿಣ ಕಾನೂನು ನಿಲುವು ತೆಗೆದುಕೊಳ್ಳುತ್ತಿದ್ದು, ಈ ಬಗ್ಗೆ ರಾಜ್ಯ ಸರ್ಕಾರದಿಂದ ಇಂದೇ ಸುಗ್ರೀವಾಜ್ಞೆ ಹೊರಡಿಸಲಾಗುವುದು ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

ಮೈಸೂರಿನಲ್ಲಿ ಮಂಗಳವಾರ ಮಾತನಾಡಿದ ಸಚಿವರು ಹೇಳಿದಿಷ್ಟು…

karnataka-governament-ordinence-on- attackasha-worker-somashekar-mysore

ಅಲ್ಲಿಯ ಕಾನೂನಿಗಿಂತಲೂ ಹೆಚ್ಚಿನ ಕಠಿಣ ಕ್ರಮಗಳಿದ್ದರೆ ಸೇರಿಸಿ ಸುಗ್ರೀವಾಜ್ಞೆ ಯೊಂದಿಗೆ ಬಿಗಿ ಕಾನೂನಿನ ಆದೇಶ ಹೊರಬೀಳಲಿದೆ. ಬಳಿಕ ಹಲ್ಲೆಕೋರರ ಬಂಧಿಸಿ ಅವರನ್ನು ಜೈಲಿಗಟ್ಟಲಾಗುವುದು.
ಸರ್ಕಾರ ಆಶಾ ಕಾರ್ಯಕರ್ತೆಯರ ಪರವಾಗಿದೆ. ಇನ್ನು ಇಂತಹ ಹಲ್ಲೆ ಪ್ರಕರಣಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದೇವೆ. ಯಾವುದೇ ಕಾರಣಕ್ಕೂ ಇಂತಹ ಘಟನೆಯನ್ನು ನಾನು ಸಹಿಸುವುದಿಲ್ಲ ಎಂದರು.
ಮೈಸೂರಿನಲ್ಲಿ 1561 ಮಂದಿಯನ್ನು ಈಗಾಗಲೇ ಪರೀಕ್ಷೆ ಮಾಡಲಾಗಿದೆ. ಇನ್ನೂ ಪರೀಕ್ಷೆಗಳು ನಡೆಯುತ್ತಿದ್ದು, ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವರು ತಿಳಿಸಿದರು.

key words : karnataka-governament-ordinence-on- attackasha-worker.