Tuesday, August 18, 2026

BDA Apartments

Home Front Page ಪಾದರಾಯನಪುರ ಗಲಭೆಕೋರರ ವಿರುದ್ದ ಕಠಿಣ ಶಿಕ್ಷೆಗೊಳಪಡಿಸಿ: ಸಿದ್ದರಾಮಯ್ಯ

ಪಾದರಾಯನಪುರ ಗಲಭೆಕೋರರ ವಿರುದ್ದ ಕಠಿಣ ಶಿಕ್ಷೆಗೊಳಪಡಿಸಿ: ಸಿದ್ದರಾಮಯ್ಯ

ಬೆಂಗಳೂರು, ಏಪ್ರಿಲ್ 19, 2020 (www.justkannada.in): ಪಾದರಾಯನಪುರದಲ್ಲಿ ನಡೆದಿರುವ ಗಲಭೆ ಅತ್ಯಂತ ದುರದೃಷ್ಟಕರ. ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ‌ ತಡೆಯಬೇಕಾದರೆ ಇಂತಹ ದುಷ್ಕೃತ್ಯದಲ್ಲಿ ತೊಡಗಿರುವವರನ್ನು ಗುರುತಿಸಿ ಕಠಿಣ ಶಿಕ್ಷೆಗೊಳಪಡಿಸಬೇಕು ಎಂದು ಮುಖ್ಯಮಂತ್ರಿಯವರನ್ನು ಒತ್ತಾಯಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವಿಟ್ ಮಾಡಿದ್ದಾರೆ.

ಕೊರೊನಾ ಸೋಂಕಿನಿಂದ ನಮ್ಮನ್ನು ರಕ್ಷಿಸಲು ವೈದ್ಯಕೀಯ ಮತ್ತು ಪೊಲೀಸ್ ಸಿಬ್ಬಂದಿ ಆರೋಗ್ಯವನ್ನು ಪಣಕ್ಕಿಟ್ಟು ಶ್ರಮಿಸುತ್ತಿದ್ದಾರೆ. ಅವರಿಗೆ ಸಹಕರಿಸುವುದು ನಮ್ಮ ಕರ್ತವ್ಯ.

ಗಾಳಿ ಸುದ್ದಿಯಿಂದ ಪ್ರಚೋದನೆಗೊಳಗಾಗದೆ ಜನ‌ ಸಂಯಮದಿಂದ ವರ್ತಿಸಬೇಕೆಂದು ರಾಜ್ಯದ ಜನರಲ್ಲಿ ಮನವಿ ಮಾಡುತ್ತೇನೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.