Monday, September 14, 2026

BDA Apartments

Home Front Page ನವರಂಗ್ ಚಿತ್ರಮಂದಿರದ ಮುಂಭಾಗದ ಖ್ಯಾತ ಹರಿಕಥೆ ವಿದ್ವಾನ್ ಶ್ರೀ ಗುರುರಾಜಲು ನಾಯ್ಡು ವೃತ್ತ ಫಲಕ ಮಾಯ!

ನವರಂಗ್ ಚಿತ್ರಮಂದಿರದ ಮುಂಭಾಗದ ಖ್ಯಾತ ಹರಿಕಥೆ ವಿದ್ವಾನ್ ಶ್ರೀ ಗುರುರಾಜಲು ನಾಯ್ಡು ವೃತ್ತ ಫಲಕ ಮಾಯ!

ಬೆಂಗಳೂರು, ಏಪ್ರಿಲ್ 16, 2020 (www.justkannada.in): ಬೆಂಗಳೂರಿನ ಹೃದಯ  ಭಾಗವಾದ ರಾಜಾಜಿನಗರದಲ್ಲಿರುವ  ನವರಂಗ್ ಚಿತ್ರಮಂದಿರದ ಮುಂಭಾಗದ ರಸ್ತೆಗೆ ಖ್ಯಾತ ಹರಿಕಥೆ ವಿದ್ವಾನ್ ಶ್ರೀ ಗುರುರಾಜಲು ನಾಯ್ಡು ವೃತ್ತ ಎಂದು ಬಹಳ ವರ್ಷಗಳ ಹಿಂದೆ  ನಾಮಕರಣ ಮಾಡಲಾಗಿತ್ತು. ಇದೀಗ ಆ ನಾಮಫಲಕವೇ ಮಾಯವಾಗಿದೆ.

ಹೌದು. ನವರಂಗ್ ಚಿತ್ರ ಮಂದಿರದ  ಮುಂಭಾಗದ ವೃತ್ತದಲ್ಲಿ ನಾಮಕರಣದ ಫಲಕವೇ ಮಾಯವಾಗಿದೆ.  ಕೂಡಲೇ ಸಂಬಂಧಪಟ್ಟ ಬಿಬಿಎಂಪಿ ಅಧಿಕಾರಿಗಳು ಎಚ್ಚೆತ್ತುಕೊಂಡು ನಾಮಫಲಕವನ್ನು ಅಳವಡಿಸಬೇಕಾಗಿದೆ.

ಶಿಕ್ಷಣ ಸಚಿವರು ಹಾಗೂ ರಾಜಾಜಿನಗರ ಕ್ಷೇತ್ರದ ಶಾಸಕ ಸನ್ಮಾನ್ಯ  ಶ್ರೀ ಎಸ್ .ಸುರೇಶ್ ಕುಮಾರ್  ಹಾಗೂ ಸಂಬಂಧಪಟ್ಟ  ನಗರಪಾಲಿಕೆ ಸದಸ್ಯರು ಈ ಕುರಿತು ಕ್ರಮವಹಿಸಬೇಕಾಗಿದೆ.