Sunday, August 23, 2026

BDA Apartments

Home Front Page ಕೊರೋನಾದಿಂದ ಕಾಪಾಡಲು ಚಾಮುಂಡೇಶ್ವರಿ ದೇವಿಗೆ ಸಚಿವ ಸೋಮಶೇಖರ್ ಪ್ರಾರ್ಥನೆ

ಕೊರೋನಾದಿಂದ ಕಾಪಾಡಲು ಚಾಮುಂಡೇಶ್ವರಿ ದೇವಿಗೆ ಸಚಿವ ಸೋಮಶೇಖರ್ ಪ್ರಾರ್ಥನೆ

ಮೈಸೂರು, ಏಪ್ರಿಲ್ 10, 2020 (www.justkannada.in): ಜನರ ನೆಮ್ಮದಿ ಕಿತ್ತುಕೊಂಡ ಕೊರೋನಾ ಮಹಾಮಾರಿಯು ಜನತೆಯಿಂದ ಬಿಟ್ಟು ಹೋಗಲಿ ಎಂದು ಮಾತೆ ಚಾಮುಂಡೇಶ್ವರಿ ದೇವಿಯಲ್ಲಿ ಕೋರಿಕೊಂಡಿರುವೆ. ಆದಷ್ಟು ಬೇಗ ಈ ರೋಗ ಇಲ್ಲಿಂದ ತೊಲಗಲಿ ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಹೇಳಿದ್ದಾರೆ.

ಸನ್ಮಾನ್ಯ ಸಚಿವರು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಚಾಮುಂಡೇಶ್ವರಿ ದೇಗುಲಕ್ಕೆ ಭೇಟಿ ನೀಡಿ ದೇವರಲ್ಲಿ ಪ್ರಾರ್ಥಿಸಿದರು. ಬಳಿಕ ಕೊರೋನ ಮಹಾಮಾರಿಯಿಂದ ರಾಜ್ಯದ ಜನತೆಯನ್ನು ಹಾಗೂ ದೇಶವನ್ನು ಕಾಪಾಡು ಎಂದು ಕೋರಿಕೊಂಡರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ನಾನು ಮೈಸೂರಿಗೆ ಹೋಗುತ್ತಿದ್ದೇನೆ ಎಂದು ಮುಖ್ಯಮಂತ್ರಿಗಳ ಭೇಟಿಯಾಗಿ ತಿಳಿಸಿದಾಗ, ಅವರೂ ಸಹ ಚಾಮುಂಡೇಶ್ವರಿ ದೇವಿಯಲ್ಲಿ ಪ್ರಾರ್ಥಿಸುವಂತೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ತಕ್ಷಣವೇ ದೇವಸ್ಥಾನದಲ್ಲಿ ವಿಚಾರಿಸಿ ಭೇಟಿಕೊಟ್ಟು ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡಿದ್ದೇನೆ. ಮುಖ್ಯಮಂತ್ರಿಗಳ ನಂಬಿಕೆಗೆ ಹಾಗೂ ಸಾರ್ವಜನಿಕರ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಕಾರ್ಯನಿರ್ವಹಿಸುವೆ ಎಂದು ಇದೇ ವೇಳೆ ಮಾನ್ಯ ಸಚಿವರು ತಿಳಿಸಿದರು.