Monday, August 10, 2026

BDA Apartments

Home Front Page ವಿಧಾನ ಸಭೆಯಲ್ಲಿ ‘ಕೊರೊನಾ ಪ್ಯಾಕೇಜ್’ ಪ್ರಕಟಿಸಿದ ಸಿಎಂ ಬಿಎಸ್ವೈ

ವಿಧಾನ ಸಭೆಯಲ್ಲಿ ‘ಕೊರೊನಾ ಪ್ಯಾಕೇಜ್’ ಪ್ರಕಟಿಸಿದ ಸಿಎಂ ಬಿಎಸ್ವೈ

ಬೆಂಗಳೂರು, ಮಾರ್ಚ್ 24, 2020 (www.justkannada.in): ಲಾಕ್ ಡೌನ್ ನಿಂದ ಸಂಕಷ್ಟಕ್ಕೀಡಾಗಿರುವ ಬಡ ಜನರಿಗಾಗಿ ವಿಧಾನ ಸಭೆಯಲ್ಲಿ ‘ಕೊರೊನಾ ವೈರಸ್ ವಿಶೇಷ ಪ್ಯಾಕೇಜ್’ ಅನ್ನು ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ.

ಕಟ್ಟಡ ಕಾರ್ಮಿಕರಿಗೆ ಮಾಸಿಕ ಒಂದು ಸಾವಿರ ರೂ. ನೀಡಲಾಗುವುದು. ಬಡವರ ಬಂಧು ಯೋಜನೆಯಡಿ ಸಾಲ ಪಡೆದ ಸಾಲ ಮನ್ನಾ ಮಾಡಲಾಗುವುದು. ಜತಗೆ ಎರಡು ತಿಂಗಳ ಪಡಿತರವನ್ನು ಮುಂಚಿತವಾಗಿ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿಗಳು ಈ ಘೋಷಣೆ ಮಾಡಿದ್ದಾರೆ.

ಲಾಕ್ ಡೌನ್ ನಿಂದ ಬಡ ಹಾಗೂ ಜನ ಸಾಮಾನ್ಯರು ಸಂಕಷ್ಟ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಈ ಕ್ರಮ ಕೈಗೊಂಡಿದ್ದಾರೆ. ಇದರ ಜತೆಗೆ ಸಾಮಾಜಿಕ ಪಿಂಚಣಿ ಯೋಜನೆಯಡಿ ಎರಡು ತಿಂಗಳ ಪಿಂಚಣಿಯನ್ನು ಮುಂಚಿತವಾಗಿಯೇ ಬಿಡುಗಡೆ ಮಾಡಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.