Tuesday, October 6, 2026

BDA Apartments

immense respect BDA JK_Adv BDA Adv
Home Front Page ರಾಜೀನಾಮೆ ಕೊಟ್ರೆ ನಮ್ಮ ಇಡೀ ಗ್ಯಾಂಗ್ ಒಟ್ಟಿಗೆ ಕೊಡ್ತೇವೆ: ರಮೇಶ್ ಜಾರಕಿ

ರಾಜೀನಾಮೆ ಕೊಟ್ರೆ ನಮ್ಮ ಇಡೀ ಗ್ಯಾಂಗ್ ಒಟ್ಟಿಗೆ ಕೊಡ್ತೇವೆ: ರಮೇಶ್ ಜಾರಕಿ

ಬೆಂಗಳೂರು, ಮೇ 26, 2019 (www.justkannada.in): ರಾಜೀನಾಮೆ ವಿಷಯದಲ್ಲಿ ಇನ್ನು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಕಾಂಗ್ರೆಸ್‍ನ ಬಂಡಾಯ ಶಾಸಕ ರಮೇಶ್ ಜಾರಕಿ ಹೊಳಿ ಹೇಳಿದ್ದಾರೆ.

ಕೊಡುವುದಾದರೆ ನಾನೊಬ್ಬನೇ ರಾಜೀನಾಮೆ ಕೊಡುವುದಿಲ್ಲ, ನಮ್ಮದೊಂದು ತಂಡ ಇದೆ. ಅವರೆಲ್ಲರೂ ಒಟ್ಟಾಗಿಯೇ ರಾಜೀನಾಮೆ ಕೊಡುತ್ತೇವೆ ಎಂದು ಬೆಂಗಳೂರಿನಲ್ಲಿಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.

ರಾಜೀನಾಮೆ ಕೊಡುವುದಾಗಿ ಎಲ್ಲೂ ಹೇಳಿಲ್ಲ. ಸದ್ಯಕ್ಕೆ ನಾನು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.ಎಸ್.ಎಂ.ಕೃಷ್ಣ ಅವರ ಆರೋಗ್ಯ ವಿಚಾರಿಸುವ ಸಲುವಾಗಿ ಬಂದಿದ್ದೆ. ರಾಜೀನಾಮೆ ನೀಡುವುದಾದರೆ ಮಾಧ್ಯಮದವರಿಗೆ ಹೇಳಿಯೇ ಕೊಡುತ್ತೇನೆ ಎಂದಿದ್ದಾರೆ.