Saturday, October 17, 2026

Dasara Wishes

ಮಾವಿಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹ: ಇಂದು ಕೋಲಾರ ಬಂದ್ DasraWishes_JK DasraWishes JK
Happy Dasara
Home Crime ಶಾಸಕ ತನ್ವೀರ್ ಸೇಠ್  ಅವರ ಆಪ್ತನ ಕೊಲೆಗೆ ಯತ್ನ…

ಶಾಸಕ ತನ್ವೀರ್ ಸೇಠ್  ಅವರ ಆಪ್ತನ ಕೊಲೆಗೆ ಯತ್ನ…

ಮೈಸೂರು,ಮಾ,6,2020(www.justkannada.in):  ಶಾಸಕ ತನ್ವೀರ್ ಸೇಠ್  ಅವರ ಆಪ್ತನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ನಡೆದಿದೆ.

ಮಾಜಿ‌ ಪಾಲಿಕೆ ಸದಸ್ಯ ಹಾಗೂ  ತನ್ವೀರ್ ಸೇಠ್ ಆಪ್ತ ಅಣ್ಣಯ್ಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಮೈಸೂರಿನ ಯರಗನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಗ್ರಾಮದೇವತೆ ಹಬ್ಬದ ವೇಳೆ ಕಾಂಗ್ರೆಸ್ ಮುಖಂಡರಾಗಿರುವ ಅಣ್ಣಯ್ಯ ಮೇಲೆ ಕೊಲೆಯತ್ನ ನಡೆದಿದ್ದು  ರಾಜಕೀಯ ವೈಷಮ್ಯದಿಂದ ಹಲ್ಲೆ ನಡೆದಿದೆ ಎನ್ನಲಾಗಿದೆ. ಯರಗನಹಳ್ಳಿಯ ಮಹದೇವು , ಚಿದಂಬರಂ ಎಂಬುವವ ಈ ಕೃತ್ಯವೆಸಗಿದ್ದು ಸದ್ಯ ಅಣ್ಣಯ್ಯರನ್ನ ಖಾಸಗಿ ಆಸ್ಪತ್ರೆಗೆ  ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಗ್ರಾಮಸ್ಥರು ಆರೋಪಿ ಮಹದೇವನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಮತ್ತೋರ್ವ ಆರೋಪಿ ಚಿದಂಬರಂ ಪರಾರಿಯಾಗಿದ್ದು, ಆಲನಹಳ್ಳಿ ಪೊಲೀಸ್ ಠಾಣೆ ಮುಂದೆ ತಡರಾತ್ರಿವರೆಗೂ ಜನ ಜಮಾಯಿಸಿದ್ದರು. ಯರಗನಹಳ್ಳಿಯಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ  ಶಾಸಕ ತನ್ವೀರ್ ಸೇಠ್  ಅವರ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದ ಘಟನೆ ನಡೆದು ಭಾರಿ ಸುದ್ದಿಯಾಗಿತ್ತು. ನಂತರ ಶಾಸಕ ತನ್ವೀರ್ ಸೇಠ್ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಈ ಬೆನ್ನಲ್ಲೆ ಇದೀಗ ಅವರ ಆಪ್ತನ ಮೇಲೆ ಹಲ್ಲೆಯಾಗಿದೆ.

Key words: MLA- Tanveer Saith-friend-attack-ausult-mysore