Thursday, August 20, 2026

BDA Apartments

Home Front Page ಸರಗೂರು ತಾಲೂಕಿನಲ್ಲಿ ಮನುಷ್ಯನ ಮುಖ ಹೋಲುವ ಆಡು ಮರಿ ಜನನ !

ಸರಗೂರು ತಾಲೂಕಿನಲ್ಲಿ ಮನುಷ್ಯನ ಮುಖ ಹೋಲುವ ಆಡು ಮರಿ ಜನನ !

ಮೈಸೂರು, ಮೇ 26, 2019 (www.justkannada.in): ಸರಗೂರು ತಾಲೂಕಿನ ಹುಲಿಕುರ ಗ್ರಾಮದಲ್ಲಿ ಮಾನವನ ಮುಖ ಹೋಲುವ ಆಡು ಮರಿ ಜನಿಸಿದ್ದು, ಅಚ್ಚರಿಗೆ ಕಾರಣವಾಗಿದೆ.

ಗ್ರಾಮದ ದಾಸಯ್ಯ ಎಂಬುವವರ ಮನೆಯಲ್ಲಿ ಜನಿಸಿದ ಆಡು ಮರಿ ಮುಖ ಮಾನವ ಮುಖ ಹೋಲುತ್ತಿದೆ. ನಿನ್ನೆ ದಾಸಯ್ಯ ಅವರ ಆಡು ಮರಿ ಹಾಕಿತ್ತು. ನೋಡಿದರೆ ಅದರ ಮುಖ ಮನುಷ್ಯನ ಮುಖ ಹೋಲುವಂತಿತ್ತು. ಇದನ್ನು ನೋಡಿ ಅವರು ಅಚ್ಚರಿ ವ್ಯಕ್ತಪಡಿಸಿದ್ದರು.

ಆಡು ಮರಿ ನೋಡಲು ಜನ ಮುಗ್ಗಿ ಬಿದ್ದರು. ಇದಾದ ಬಳಿಕ ಆ ಆಡು ಮರಿ ಮೃತಪಟ್ಟಿದೆ. ಈ ವಿಶೇಷ ಆಡು ಮರಿ ಕೇವಲ ಒಂದು ದಿನ ಮಾತ್ರ ಬದುಕುಳಿದಿತ್ತು.