Monday, August 10, 2026

BDA Apartments

Home Cinema ಪಿಆರ್’ಕೆ ಪ್ರೊಡಕ್ಷನ್’ನ ಮಾಯಾಬಜಾರ್’ಗೆ ಪೈರಸಿ ಕಾಟ: ಬೆಂಗಳೂರಿನ ಸದಾಶಿವ ಪೊಲೀಸ್ ಠಾಣೆಯಲ್ಲಿ ಪ್ರಕರಣ

ಪಿಆರ್’ಕೆ ಪ್ರೊಡಕ್ಷನ್’ನ ಮಾಯಾಬಜಾರ್’ಗೆ ಪೈರಸಿ ಕಾಟ: ಬೆಂಗಳೂರಿನ ಸದಾಶಿವ ಪೊಲೀಸ್ ಠಾಣೆಯಲ್ಲಿ ಪ್ರಕರಣ

ಬೆಂಗಳೂರು, ಮಾರ್ಚ್ 03, 2020 (www.justkannada.in): ಸ್ಯಾಂಡಲ್ ವುಡ್ ನಲ್ಲಿ ಸದ್ದಿಲ್ಲದೇ ಸುದ್ದಿ ಮಾಡಲು ಬಿಡುಗಡೆಗೊಂಡಿದ್ದ ಹೊಸ ಚಿತ್ರವೊಂದು ಬಿಡುಗಡೆಯಾದ ದಿನವೇ ಪೈರಸಿ ಕಾಟಕ್ಕೆ ನಲುಗಿದೆ.

ಮಾಯಾಬಜಾರ್ ಚಲನಚಿತ್ರವನ್ನು ಬಿಡುಗಡೆಗೊಂಡ ದಿನವೇ ಪೈರಸಿ ಮಾಡಲಾಗಿದೆ ಎಂದು ಆರೋಪಿಸಿ ಚಿತ್ರತಂಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

ನಟ ಪುನಿತ್ ರಾಜಕುಮಾರ್ ನಿರ್ಮಾಣದ ಮಾಯಾಬಜಾರ್ ಚಲನಚಿತ್ರವನ್ನು ಪೈರಸಿ ಮಾಡಿದ್ದರ ವಿರುದ್ಧ ಬೆಂಗಳೂರಿನ ಸದಾಶಿವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.