Sunday, August 23, 2026

BDA Apartments

Home Front Page ಕೆಪಿಸಿಸಿ ಅಧ್ಯಕ್ಷನಾಗಿ ಸೋಲಿನ ಹೊಣೆ ನಾನೇ ಹೊರುತ್ತೇನೆ-ದಿನೇಶ್ ಗುಂಡೂರಾವ್

ಕೆಪಿಸಿಸಿ ಅಧ್ಯಕ್ಷನಾಗಿ ಸೋಲಿನ ಹೊಣೆ ನಾನೇ ಹೊರುತ್ತೇನೆ-ದಿನೇಶ್ ಗುಂಡೂರಾವ್

ಬೆಂಗಳೂರು,ಮೇ,25,2019(www.justkannada.in):  ಕೆಪಿಸಿಸಿ ಅಧ್ಯಕ್ಷನಾಗಿ ಕಾಂಗ್ರೆಸ್ ಸೋಲಿನ ಹೊಣೆಯನ್ನ ನಾನೇ ಹೊರುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್,  ಕಾಂಗ್ರೆಸ್ ಗೆ ಫಲಿತಾಂಶ ಕಡಿಮೆ ಬರಲು ಬೇಕಾದಷ್ಟು ಕಾರಣಗಳಿವೆ . ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಗಮನಕ್ಕೆ ತರುತ್ತೇನೆ. ನಂತರ ರಾಹುಲ್ ಗಾಂಧಿ ಕೈಗೊಳ್ಳುವ ನಿರ್ಧಾರಕ್ಕೆ ನಾನು ಬದ್ಧ ಎಂದರು.

ಹಾಗೆಯೇ  ಜನರ ತೀರ್ಪು ಗೌರವಯುತವಾದದ್ದು. ಅವರ ತೀರ್ಪನ್ನ ಒಪ್ಪಿಕೊಳ್ಳುತ್ತೇವೆ. ಬಿಜೆಪಿ ಬಹುದೊಡ್ಡ ಗೆಲುವಿಗೆ  ಅಭಿನಂದನೆ ಸಲ್ಲಿಸುತ್ತೇನೆ. ರಾಜಕೀಯದಲ್ಲಿ ಸೋಲನ್ನ ಧೈರ್ಯದಿಂದ ಎದುರಿಸಬೇಕು. ಫಲಿತಾಂಶ ನನಗೆ ಅಶ್ಚರ್ಯ ತಂದಿದೆ.  ಇಂತಹ ಫಲಿತಾಂಶ ಬರುತ್ತೆ ಅಂತಾ ಕನಸುಮನಸಲ್ಲಿ ಊಹಿಸಿರಲಿಲ್ಲ ಎಂದು  ದಿನೇಶ್ ಗುಂಡೂರಾವ್ ನುಡಿದರು.

ಇನ್ನು ಕಾಂಗ್ರೆಸ್ ಸೋಲಿಗೆ ನೈತಿಕ ಹೊಣೆ ಹೊತ್ತಿ ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಚಿಂತನೆ ನಡೆಸಿದ್ದಾರೆಂದು ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿತ್ತು.

Key words: I am responsible for defeat as KPCC president-Dinesh Gundurao

#Dines Gundurao #responsible #defeat #congress