Thursday, August 13, 2026

BDA Apartments

Home Cinema ‘ನವರಸ ನಾಯಕನ ನಾಲ್ಕು ಹೆಜ್ಜೆ’ ಪುಸ್ತಕ ರೂಪದಲ್ಲಿ ಬರಲಿದೆ ಜಗ್ಗೇಶ್ ಜೀವನಕಥೆ

‘ನವರಸ ನಾಯಕನ ನಾಲ್ಕು ಹೆಜ್ಜೆ’ ಪುಸ್ತಕ ರೂಪದಲ್ಲಿ ಬರಲಿದೆ ಜಗ್ಗೇಶ್ ಜೀವನಕಥೆ

ಬೆಂಗಳೂರು, ಮೇ 25, 2019 (www.justkannada.in): ನವರಸ ನಾಯಕ ಜಗ್ಗೇಶ್ ಕೂಡಾ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ವೈಯಕ್ತಿಕ ಹಾಗೂ ಸಿನಿಮಾ ಜೀವನದ ಕುರಿತು ಪೋಸ್ಟ್ ಮಾಡುತ್ತಾರೆ.

ತಮ್ಮ ಜೀವನದಲ್ಲಿ ಘಟಿಸಿದ ಘಟನೆಗಳ ಕುರಿತು ಸಂದರ್ಶನಗಳಲ್ಲೂ ಹೇಳಿಕೊಳ್ಳುತ್ತಲೇ ಇರುತ್ತಾರೆ. ಆರಂಭದಲ್ಲಿ ಪೋಷಕ ನಟರಾಗಿ, ಖಳನಾಯಕರಾಗಿ ಬಣ್ಣ ಹಚ್ಚಿದ ಜಗ್ಗೇಶ್ ಇಂದು ಪ್ರಮುಖ ನಟರಲ್ಲಿ ಒಬ್ಬರಾಗಿದ್ದಾರೆ.

ಜಗ್ಗೇಶ್ ನಡೆದು ಬಂದಿರುವ ಹಾದಿಯನ್ನು ಶೀಘ್ರದಲ್ಲೇ ನೀವು ಪುಸ್ತಕದಲ್ಲಿ ಓದಬಹುದಾಗಿದೆ. ಅವರ ಆತ್ಮಕತೆಯನ್ನು ಪತ್ರಕರ್ತ ತುಂಗರೇಣುಕ ಬರೆದಿದ್ದಾರೆ.

ಇದಕ್ಕೆ ‘ನವರಸ ನಾಯಕನ ನಾಲ್ಕು ಹೆಜ್ಜೆ’ ಎಂದು ಶೀರ್ಷಿಕೆಯನ್ನು ಇಡಲಾಗಿದೆ. ಶೀಘ್ರದಲ್ಲೇ ಇದು ಅಭಿಮಾನಿಗಳ ಕೈ ಸೇರಲಿದೆ.