Saturday, September 12, 2026

BDA Apartments

Home Front Page ಭಾರತವನ್ನ ಪಾಕ್ ಗೆ ಒತ್ತೆ ಇಡುವ ಮನಸ್ಥಿತಿ ಕಾಂಗ್ರೆಸ್ ಪಕ್ಷದ್ದು- ಸಚಿವ ಶ್ರೀರಾಮುಲು ವಾಗ್ದಾಳಿ…

ಭಾರತವನ್ನ ಪಾಕ್ ಗೆ ಒತ್ತೆ ಇಡುವ ಮನಸ್ಥಿತಿ ಕಾಂಗ್ರೆಸ್ ಪಕ್ಷದ್ದು- ಸಚಿವ ಶ್ರೀರಾಮುಲು ವಾಗ್ದಾಳಿ…

ರಾಯಚೂರು,ಫೆ,19,2020(www.justkannada.in): ಭಾರತವನ್ನ ಪಾಕ್ ಗೆ ಒತ್ತೆ ಇಡುವ ಮನಸ್ಥಿತಿ ಕಾಂಗ್ರೆಸ್ ಪಕ್ಷದ್ದು ಎಂದು  ಆರೋಗ್ಯ ಸಚಿವ ಶ್ರೀರಾಮುಲು ವಾಗ್ದಾಳಿ ನಡೆಸಿದರು.

ರಾಯಚೂರಿನಲ್ಲಿ ಇಂದು ಮಾತನಾಡಿದ ಸಚಿವ ಶ್ರೀರಾಮುಲು, ಭಯೋತ್ಪಾದನೆಗೆ ಪ್ರಚೋದನೆ ನೀಡಲು ಕಾಂಗ್ರೆಸ್ ಮುಂದಾಗಿದ್ದಾರೆ.  ಭಾರತವನ್ನ ಪಾಕ್ ಗೆ ಒತ್ತೆ ಇಡುವ ಮನಸ್ಥಿತಿ ಕಾಂಗ್ರೆಸ್ ಪಕ್ಷದ್ದು.  ಕಾಂಗ್ರೆಸ್ ಪಕ್ಷ ನಿರುದ್ಯೋಗಿಗಳಾಗಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಧೂಳಿಪಟವಾಗಿದೆ. ಕಾಂಗ್ರೆಸ್ ನವರು ನಿನ್ನೆ ಕಲಾಪವನ್ನ ಬಹಿಷ್ಕರಿಸುವ ಮೂಲಕ ಭಯೋತ್ಪಾದಕರ ರಕ್ಷಣೆಗೆ ಮುಂದಾಗಿದ್ದಾರೆ. ಕಸಬ್ ಕೂಡ ಹಿಂದೂ ತೀವ್ರವಾದಿ ಎಂದು ಹೇಳುತ್ತಾರೆ ಎಂದು ಕಿಡಿಕಾರಿದರು.

ಪಾಕ್ ಪರ ಘೊಷಣೆ ವಿಚಾರ ಕುರಿತು ಮಾತನಾಡಿದ ಸಚಿವ ಶ್ರೀರಾಮುಲು,  ಪಾಕ್ ಪರ ಘೋಷಣೆ ಕೂಗಿದ್ರೆ ಸುಮ್ಮನಿರಲ್ಲ. ದೇಶದ ಯಾವುದೇ ಜಾತಿಯ ವ್ಯಕ್ತಿಯಾಗಿರಲಿ ಭಾರತ ಮಾತಾಕೀ ಜೈ ಎನ್ನವೇಕು. ಪಾಕ್ ಗೆ ಜೈ ಅನ್ನಬಾರದು ಎಂದು ತಿಳಿಸಿದರು.

Key words:  Congress party –terrorist- Stimulation-  Minister -Shriramulu