Friday, September 11, 2026

BDA Apartments

Home Crime ಪತ್ನಿಯೊಂದಿಗೆ ಜಗಳವಾಡುವ ವೇಳೆ  ಬಿಡಿಸಲು ಬಂದ ಮಾವನನ್ನೇ ಕೊಂದ ಅಳಿಯ…

ಪತ್ನಿಯೊಂದಿಗೆ ಜಗಳವಾಡುವ ವೇಳೆ  ಬಿಡಿಸಲು ಬಂದ ಮಾವನನ್ನೇ ಕೊಂದ ಅಳಿಯ…

ಮೈಸೂರು,ಫೆ,12,2020(www.justkannada.in):  ಪತ್ನಿಯೊಂದಿಗಿನ ಜಗಳ ಬಿಡಿಸಲು ಬಂದ ಮಾವನನ್ನೇ ಅಳಿಯ ಕೊಂದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಗೌಸಿಯಾನಗರದಲ್ಲಿ ಘಟನೆ ನಡೆದಿದೆ. ಮೈಸೂರಿನ ಗೌಸಿಯಾನಗರದ ನಿವಾಸಿ ಆಟೊ ಚಾಲಕ ಸಲೀಂ (೫೦) ಕೊಲೆಯಾದವರು.‌ ಸಲೀಂ ತನ್ನ ಪುತ್ರಿಯನ್ನು ಕೆಲ ವರ್ಷಗಳ ಹಿಂದೆ ಪೈಂಟರ್ ಆಗಿದ್ದ ನದೀಂ ಎಂಬಾತನೊಂದಿಗೆ ವಿವಾಹ ಮಾಡಿಕೊಟ್ಟಿದ್ದರು.

ಹೆಂಡತಿಯ ಮೇಲೆ ಅನುಮಾನಗೊಂಡು ಸಲೀಂ ನಿತ್ಯ ಜಗಳ ವಾಡುತ್ತಿದ್ದನು. ಪತಿ, ಪತ್ನಿ ನಡುವೆ ಪ್ರತಿ ಬಾರಿ ಜಗಳ ನಡೆದಾಗಲೆಲ್ಲ ಮಾವ ಸಲೀಂ ಹೋಗಿ ರಾಜಿ ಪಂಚಾಯಿತಿ ಮಾಡುತ್ತಿದ್ದರು.  ಇದೇ ರೀತಿ ಇಂದೂ ಸಹ ಗಂಡಹೆಂಡತಿ ನಡುವೆ ಜಗಳ ಆಗಿದೆ. ಈ ವೇಳೆ ನದೀಮ್ ಚಾಕು ತಂದು ಹೆಂಡತಿಯನ್ನ ಸಾಯಿಸಲು ಮುಂದಾಗಿದ್ದಾನೆ ಈ ವೇಳೆ ಮಾವ ಸಲೀಂ ಮನೆಗೆ ಬಂದು ಜಗಳ ಬಿಡಿಸಲು ಹೋದಾಗ ಕೋಪಗೊಂಡ ಅಳಿಯ ನದೀಮ್ ಚಾಕುವಿನಿಂದ  ಮಾವ ಸಲೀಂ ಕುತ್ತಿಗೆಗೆ ಇರಿದಿದ್ದಾನೆ. ಕುತ್ತಿಗೆಯ ಎಡ ಭಾಗಕ್ಕೆ ಚಾಕುವಿನಿಂದ ಬಲವಾಗಿ ಇರಿದಿದ್ರಿಂದ ಸಲೀಂ ಮೃತಪಟ್ಟಿದ್ದಾರೆ. ಈ ಸಂಬಂಧ ಉದಯಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: mysore-killed- father-in-law-  wife