Sunday, October 11, 2026

Dasara Wishes

ಗೂಗಲ್ ಕಂಪನಿ ಜತೆ VTU ಶೈಕ್ಷಣಿಕ ಒಪ್ಪಂದ: ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಸಹಿ ...
Happy Dasara
Home Front Page ದರಿದ್ರ ಸರ್ಕಾರ ಎಂಬ ಸಿದ್ದರಾಮಯ್ಯ ಟೀಕೆಗೆ ತಿರುಗೇಟು: ದೆಹಲಿ ಫಲಿತಾಂಶದಿಂದ ಬಿಜೆಪಿಗೆ ಹಿನ್ನಡೆಯಾಗಲ್ಲ ಎಂದ ಡಿಸಿಎಂ...

ದರಿದ್ರ ಸರ್ಕಾರ ಎಂಬ ಸಿದ್ದರಾಮಯ್ಯ ಟೀಕೆಗೆ ತಿರುಗೇಟು: ದೆಹಲಿ ಫಲಿತಾಂಶದಿಂದ ಬಿಜೆಪಿಗೆ ಹಿನ್ನಡೆಯಾಗಲ್ಲ ಎಂದ ಡಿಸಿಎಂ ಗೋವಿಂದ ಕಾರಜೋಳ…

ಬಾಗಲಕೋಟೆ,ಫೆ,11,2020(www.justkannada.in): ದೆಹಲಿ ವಿಧಾನಸಭಾ  ಫಲಿತಾಂಶದಿಂದ ಬಿಜೆಪಿಗೆ ಯಾವುದೇ ಹಿನ್ನಡೆಯಾಗಲ್ಲ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ.

ಬಾಗಲಕೋಟೆಲಯಲ್ಲಿ ಇಂದು ಮಾತನಾಡಿದ ಡಿಸಿಎಂ ಗೋವಿಂದ ಕಾರಜೋಳ,  ದೆಹಲಿ ವಿಧಾನಸಭಾ ಚುನಾವಣೆ ಒಂದು ಊರಿನ ಚುನಾವಣೆಯಂತೆ. ಅರವಿಂದ್ ಕೇಜ್ರಿವಾಲ್ ಅಲ್ಲಿ ದೊಡ್ಡ ಆಡಳಿತ ಮಾಡಿದ್ದಾರೆ  ದೆಹಲಿ ಫಲಿತಾಂಶದಿಂದ ಬಿಜೆಪಿಗೆ  ಹಿನ್ನಡೆಯಾಗಲ್ಲ. ಲೋಕಸಭೆಯಲ್ಲಿ ನಾವು 7ಕ್ಕೆ 7 ಹೇಗೆ ಗೆದ್ದವು.  ಹೀಗಾಗಿ ಬಿಜೆಪಿಗೆ ಹಿನ್ನಡೆಯಾಗಲ್ಲ ಎಂದರು.

ಬಿಜೆಪಿ ಸರ್ಕಾರ ದರಿದ್ರ ಸರ್ಕಾರ ಎಂದು ಟೀಕಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯಗೆ ತಿರುಗೇಟು ನೀಡಿದ ಡಿಸಿಎಂ ಗೋವಿಂದ ಕಾರಜೋಳ. ಹೆಚ್ಚು ಸಾಲವನ್ನ ಮಾಡಿದ್ದು  ಸಿದ್ದರಾಮಯ್ಯ.  ಸಿದ್ದು ಸರ್ಕಾರದಿಂದಲೇ ದರಿದ್ರ ಶುರುವಾಗಿದ್ದು. ಪ್ರಕೃತಿ ವಿಕೋಪದಿಂದ ಬಹಳ ನಷ್ಟವಾಗಿದೆ.  ಸುಮಾರು 36 ಸಾವಿರ ಕೋಟಿಗೂ ಹೆಚ್ಚು ಹೊರೆಯಾಗಿದೆ. ಹೀಗಾಗಿ ಸ್ವಲ್ಪ ಆರ್ಥಿಕ ಹಿನ್ನಡೆಯಾಗಿದೆ. ಆದ್ರೆ ಸಿದ್ದರಾಮಯ್ಯ ಹೇಳಿದ ರೀತಿ ತೊಂದರೆಯಾಗಿಲ್ಲ ಎಂದು ತಿಳಿಸಿದರು.

Key words: bagalakote-DCM- Govinda karjola-former cm-siddaramaiah