Friday, August 28, 2026

BDA Apartments

Home Front Page ಅಪಘಾತಕ್ಕೀಡಾಗಿದ್ದ ಯುವಕನ ಅಂಗಾಂಗ ದಾನ: ಮೈಸೂರಿನಿಂದ ಬೆಂಗಳೂರಿಗೆ ಜೀವಂತ ಹೃದಯ ರವಾನೆ…

ಅಪಘಾತಕ್ಕೀಡಾಗಿದ್ದ ಯುವಕನ ಅಂಗಾಂಗ ದಾನ: ಮೈಸೂರಿನಿಂದ ಬೆಂಗಳೂರಿಗೆ ಜೀವಂತ ಹೃದಯ ರವಾನೆ…

ಮೈಸೂರು,ಫೆ,11,2020(www.justkannada.in): ಅಪಘಾತಕ್ಕೀಡಾಗಿ ಮೆದುಳು ನಿಷ್ಕ್ರಿಯಗೊಂಡಿದ್ದ ಹಿನ್ನೆಲೆ ಯುವಕನ ಅಂಗಾಂಗ ದಾನ ಮಾಡುವ ಮೂಲಕ ಯುವಕನ ಕುಟುಂಬಸ್ಥರು ಮಾನವೀಯತೆ ಮೆರೆದಿದ್ದಾರೆ.

ಕಳೆದ 9ನೇ ತಾರೀಖಿನಂದು ಪಿರಿಯಾಪಟ್ಟಣದ ಕೊಪ್ಪ ಬಳಿ ರಸ್ತೆ ಅಪಘಾತವಾಗಿತ್ತು. ಅಪಘಾತದಿಂದಾಗಿ ಯುವಕ ಮದನ ರಾಜ್(22) ಮೆದುಳು ನಿಷ್ಕ್ರಿಯಗೊಂಡಿತ್ತು.  ಹೀಗಾಗಿ ಅಂಗಾಂಗ ದಾನ ಮಾಡಲು ಯುವಕ ಮದನ್ ರಾಜ್ ಕುಟುಂಬಸ್ಥರು ಒಪ್ಪಿಗೆ ನೀಡಿದ್ದು, ಈ ಹಿನ್ನೆಲೆ ಮೈಸೂರಿನಿಂದ ಯುವಕನ ಜೀವಂತ ಹೃದಯವನ್ನ ಬೆಂಗಳೂರಿಗೆ ರವಾನೆ ಮಾಡಲಾಗುತ್ತಿದೆ.

ಮೈಸೂರಿನ ಅಪೋಲೋ ಆಸ್ಪತ್ರೆಯಿಂದ ಬೆಂಗಳೂರಿನ ನಾರಾಯಣ ಹೃದಯಾಲಕ್ಕೆ ಹೃದಯ ರವಾನೆ ಮಾಡಲಾಗುತ್ತಿದ್ದು, ಗ್ರೀನ್ ಕಾರಿಡಾರ್ ನಲ್ಲಿ ರಸ್ತೆ ಮೂಲಕ ಹೃದಯ ಸಾಗಲಿದೆ. ಗ್ರೀನ್ ಕಾರಿಡಾರ್ ಗೆ ಪೊಲೀಸ್ ಇಲಾಖೆ  ಸಮ್ಮತಿ ಸೂಚಿಸಿದೆ.  ಪೋಲಿಸ್ ಭದ್ರತೆಯಲ್ಲಿ ಝೀರೋ ಟ್ರಾಫಿಕ್ ನಲ್ಲಿ ಜೀವಂತರ ಹೃದಯ ಸಾಗುತ್ತಿದೆ. ಒಂದು ಗಂಟೆ ಅವಧಿಯಲ್ಲಿ ಆ್ಯಂಬುಲೆನ್ಸ್  ಬೆಂಗಳೂರನ್ನ ತಲುಪಲಿದೆ.

Key words: boy-   heart- Carry-Mysore- to –Bangalore