Friday, October 2, 2026

BDA Apartments

You should utilize any platform that you get to learn: Nagathihalli Chandrashekar BDA JK_Adv BDA Adv
Home Front Page ಮೈಸೂರಿನಲ್ಲಿ ಸ್ನೇಹಿತರ ಮನೆಗೆ ಭೇಟಿ ನೀಡಿದ ‘ಕೈ’ ಮುಖಂಡ ಚಲುವರಾಯಸ್ವಾಮಿ: ಹೆಚ್.ವಿಶ್ವನಾಥ್ ಮತ್ತು ಎಂಟಿಬಿ ನಾಗರಾಜ್...

ಮೈಸೂರಿನಲ್ಲಿ ಸ್ನೇಹಿತರ ಮನೆಗೆ ಭೇಟಿ ನೀಡಿದ ‘ಕೈ’ ಮುಖಂಡ ಚಲುವರಾಯಸ್ವಾಮಿ: ಹೆಚ್.ವಿಶ್ವನಾಥ್ ಮತ್ತು ಎಂಟಿಬಿ ನಾಗರಾಜ್ ಪರ ಬ್ಯಾಟಿಂಗ್…

ಮೈಸೂರು,ಫೆ,10,2020(www.justkannada.in): ಉಪಚುನಾವಣೆಯಲ್ಲಿ ಸೋತಿರುವ ಮಾಜಿ ಸಚಿವರಾದ ಎಂಟಿಬಿ ನಾಗರಾಜ್ ಮತ್ತು ಹೆಚ್.ವಿಶ್ವನಾಥ್ ಪರ ಕಾಂಗ್ರೆಸ್ ಮುಖಂಡ ಚಲುವರಾಯಸ್ವಾಮಿ ಬ್ಯಾಟ್ ಬೀಸಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಹೆಚ್.ವಿಶ್ವನಾಥ್ ,ಎಂಟಿಬಿ ನಾಗರಾಜ್ ಕಾರಣ. ಹೀಗಾಗಿ ವಿಶ್ವನಾಥ್  ಹಾಗೂ ಎಂಟಿಬಿ ನಾಗರಾಜ್  ಅವರಿಗೆ ಬಿಜೆಪಿ ಸಚಿವ ಸ್ಥಾನ ನೀಡಲೇ ಬೇಕು ಎಂದು ಮಾಜಿ ಶಾಸಕ ಚಲುವರಾಯಸ್ವಾಮಿ ಹೇಳಿದ್ದಾರೆ.

ನಿನ್ನೆ ರಾತ್ರಿ ಮೈಸೂರಿನಲ್ಲಿ ಸ್ನೇಹಿತರ ಮನೆಗೆ ಮಾಜಿ ಶಾಸಕ ಚಲುವರಾಯಸ್ವಾಮಿ ಭೇಟಿ ನೀಡಿ ಕುಶಲೋಪರಿ ವಿಚಾರಣೆ ಮಾಡಿದರು. ಸ್ನೇಹಿತರ ಮನೆಗೆ ಆಗಮಿಸಿದ ಚಲಿಸುವರಾಯಸ್ವಾಮಿ ಅವರನ್ನ ಎಂ.ಎಲ್.ಸಿ ಸಂದೇಶ್ ನಾಗರಾಜ್ ಭೇಟಿ ಮಾಡಿದರು. ಚಲುವರಾಯಸ್ವಾಮಿಗೆ ಮಂಡ್ಯದ ಕಾಂಗ್ರೆಸ್ ಮುಖಂಡರು ಸಾಥ್ ನೀಡಿದರು.

ಈ ವೇಳೆ ಮಾತನಾಡಿದ ಚಲುವರಾಯಸ್ವಾಮಿ, ಸ್ನೇಹಿತ ನಿರ್ಮಿಸಿದ್ದ ಕಟ್ಟಡ ಉದ್ಘಾಟನೆಗೆ ಅಂದು ಬರುಲು ಸಾಧ್ಯವಾಗಿರಲಿಲ್ಲ.ಹೀಗಾಗಿ ಇಂದು ಮೈಸೂರಿನಲ್ಲೇ ಇದ್ದೇ. ಅದ್ದರಿಂದ ಅವರ ಮನೆಗೆ ಭೇಟಿ ನೀಡಿದ್ದೇನೆ. ನಾನು ಸಕ್ರಿಯ ರಾಜಕೀಯದಿಂದ ದೂರು ಉಳಿದಿಲ್ಲ. ನಾನು ವಾರದಲ್ಲಿ 4 ದಿನ ಕ್ಷೇತ್ರದ ಜನರ ಜೊತೆಯಲ್ಲೆ ಇರುತ್ತೇನೆ. ನಾನು ಮಾಧ್ಯಮದ ಮುಂದೆ ಬಂದಿಲ್ಲ ಅಷ್ಟೆ. ಮಾಧ್ಯಮದ ಮುಂದೆ ಬರುಲು ಸೂಕ್ತ ಕಾರಣ ಬೇಕು ಹಾಗಾಗಿ ಬಂದಿಲ್ಲ ಎಂದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸ್ಪೀಡ್ ಆಗಿ ನಡಿತಿದೆ. 17 ಮಂದಿ ಶಾಸಕರನ್ನು ರಾಜೀನಾಮೆ ಕೊಡಿಸಿ ಮತ್ತೆ ಸರ್ಕಾರ ರಚನೆ ಮಾಡಿದ್ದಾರೆ. ಸಾಕಷ್ಟು ಓಡಾಟದ ನಂತರ ಸಚಿವ ಸಂಪುಟ ವಿಸ್ತರಣೆ ಮಾಡಿದ್ದಾರೆ. ಇಷ್ಟು ದಿನಗಳ ಕಾಲ ಬಿಜೆಪಿಯಿಂದ ಸೂಕ್ತ ರೀತಿಯಲ್ಲಿ ಸರ್ಕಾರ ಆಡಳಿತ ನಡೆಸಿಲ್ಲ. ಮುಂದಿನ ದಿನಗಳಲ್ಲಿ ಅವರು ಹೇಗೆ ಕೆಲಸ ಮಾಡುತ್ತಾರೆ ಅಂತ ನೋಡಬೇಕು. ಹೊಸ ಶಾಸಕರಿಗೆ ಈಗಾ ತೃಪ್ತಿಯಾಗಿದೆಯ ಅಂತ ಗೊತ್ತಿಲ್ಲ. ಅಧಿಕಾರ ಸಿಕ್ಕ ನಂತರ ಹೇಗೆ ಕಾರ್ಯ ನಿರ್ವಹಿಸುತ್ತಾರೆ ಅಂತ ನೋಡಬೇಕಿದೆ. ಅವರಿಗೂ ಸ್ವಲ್ಪ ದಿನ ಕಾಲಾವಕಾಶಕೊಟ್ಟು ಅವರ ಕಾರ್ಯ ವೈಖರಿ ನೋಡೊಣ ಎಂದು ಹೇಳಿದರು.

ವಿಶ್ವನಾಥ ಹಾಗೂ ಎಂಟಿಬಿ ಅವರಿಗೆ ಬಿಜೆಪಿ ಸಚಿವ ಸ್ಥಾನ ನೀಡಲೇ ಬೇಕು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಅವರೇ ಕಾರಣ. ವಿಶ್ವನಾಥ್ ಇಲ್ಲದಿದ್ದರೆ ಬಿಜೆಪಿ ಅಧಿಕಾರಕ್ಕೆ ಬರುತ್ತಿರಲಿಲ್ಲ. ಅವರನ್ನ ಎಂ.ಎಲ್.ಸಿ ಅನ್ನಾದರೂ ಮಾಡಿ ಮಂತ್ರಿ ಮಾಡಬೇಕು.ಅದು ಬಿಜೆಪಿ ನಾಯಕರ ಕರ್ತವ್ಯ ಎಂದು ಮಾಜಿ ಶಾಸಕ ಚಲುವರಾಯಸ್ವಾಮಿ  ತಿಳಿಸಿದರು.

Key words: congress leader-Chaluvarayaswamy – visited – friend’s house -Mysore.