Tuesday, September 29, 2026

BDA Apartments

ಅವನೇ ಶ್ರೀಮನ್ನಾರಾಯಣ ಬಳಿಕ ‘777 ಚಾರ್ಲಿ’ ಶೂಟಿಂಗ್ ನಲ್ಲಿ ರಕ್ಷಿತ್ ಶೆಟ್ಟಿ ಬ...
Home Cinema ಅವನೇ ಶ್ರೀಮನ್ನಾರಾಯಣ ಬಳಿಕ ‘777 ಚಾರ್ಲಿ’ ಶೂಟಿಂಗ್ ನಲ್ಲಿ ರಕ್ಷಿತ್ ಶೆಟ್ಟಿ ಬ್ಯೂಸಿ

ಅವನೇ ಶ್ರೀಮನ್ನಾರಾಯಣ ಬಳಿಕ ‘777 ಚಾರ್ಲಿ’ ಶೂಟಿಂಗ್ ನಲ್ಲಿ ರಕ್ಷಿತ್ ಶೆಟ್ಟಿ ಬ್ಯೂಸಿ

ಬೆಂಗಳೂರು, ಫೆಬ್ರವರಿ 07, 2020 (www.justkannada.in): ರಕ್ಷಿತ್ ಶೆಟ್ಟಿ ಇದೀಗ ತಮ್ಮ ಮುಂದಿನ ಪ್ರಾಜೆಕ್ಟ್ ಗಳತ್ತ ಚಿತ್ತ ಹರಿಸಿದ್ದಾರೆ.

ಅವನೇ ಶ್ರೀಮನ್ನಾರಾಯಣ ಸಿನಿಮಾ ಯಶಸ್ಸಿನ ಬಳಿಕ ಸುಮ್ಮನೇ ಕೂರದ ರಕ್ಷಿತ್ ತಮ್ಮ ಹೊಸ ಸಿನಿಮಾ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ರಕ್ಷಿತ್ ಕೈಗೆತ್ತಿಕೊಂಡಿರುವ ಮತ್ತೊಂದು ಡ್ರೀಮ್ ಪ್ರಾಜೆಕ್ಟ್ ‘777 ಚಾರ್ಲಿ’.

ಅವನೇ ಶ್ರೀಮನ್ನಾರಾಯಣ ಸಿನಿಮಾ ಬಳಿಕ ರಕ್ಷಿತ್ ಶೆಟ್ಟಿ ಕೆಲವು ದಿನ ಬ್ರೇಕ್ ತಗೊಂಡಿದ್ದಾರಾ ಎಂಬ ಪ್ರಶ್ನೆಗೆ ಅವರಿಂದಲೇ ಉತ್ತರ ಸಿಕ್ಕಿದೆ. ಈ ಸಿನಿಮಾದ ಶೂಟಿಂಗ್ ಆರಂಭವಾಗಿದ್ದು, ಗೋವಾದಲ್ಲಿ ಚಿತ್ರತಂಡ ಬೀಡುಬಿಟ್ಟಿದೆ.

ರಕ್ಷಿತ್ ಈ ಸಿನಿಮಾದ ಶೂಟಿಂಗ್ ಸೆಟ್ ನ ಅದ್ಭುತ ಫೋಟೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.