Monday, November 2, 2026

Dasara Wishes

Happy Dasara
Home Front Page ಬಂಗಾಳ ಕ್ರಿಕೆಟ್ ಸಂಸ್ಥೆಗೆ ಅತೀ ಕಿರಿಯ ಅಧ್ಯಕ್ಷ ಅಭಿಷೇಕ್ ದಾಲ್ಮಿಯಾ

ಬಂಗಾಳ ಕ್ರಿಕೆಟ್ ಸಂಸ್ಥೆಗೆ ಅತೀ ಕಿರಿಯ ಅಧ್ಯಕ್ಷ ಅಭಿಷೇಕ್ ದಾಲ್ಮಿಯಾ

ಕೋಲ್ಕತ್ತ, ಫೆಬ್ರವರಿ 06, 2019 (www.justkannada.in): ಬಂಗಾಳ ಕ್ರಿಕೆಟ್ ಸಂಸ್ಥೆಯ ಇತಿಹಾಸದಲ್ಲಿಯೇ ಅತ್ಯಂತ ಕಿರಿಯ ವಯಸ್ಸಿನ ಅಧ್ಯಕ್ಷರಾಗಿ ಅಭಿಷೇಕ್ ದಾಲ್ಮಿಯಾ ಅವಿರೋಧವಾಗಿ ಆಯ್ಕೆಯಾದರು.

ಸಂಸ್ಥೆಯ ಸರ್ವಸದಸ್ಯರ ಸಭೆಯಲ್ಲಿ 38 ವರ್ಷದ ಅಭಿಷೇಕ್ ಅವರನ್ನು ನೇಮಕ ಮಾಡಲಾಯಿತು. ಸೌರವ್ ಗಂಗೂಲಿ ಅವರು ಬಿಸಿಸಿಐ ಅಧ್ಯಕ್ಷರಾದ ನಂತರ ಈ ಸ್ಥಾನ ತೆರವಾಗಿತ್ತು.

ಬಿಸಿಸಿಐ ಮಾಜಿ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ ಅವರ ಪುತ್ರ ಅಭಿಷೇಕ್ ಅವರು 2021ರ ನವೆಂಬರ್ 6ರವರೆಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವ ಅವಕಾಶ ವಿದೆ. ಅದರ ನಂತರ ಅವರು ಕೂಲಿಂಗ್ ಆಫ್ (ವಿರಾಮ) ನಿಯಮಕ್ಕೆ ಒಳಪಡಲಿದ್ದಾರೆ. ಸಿಎಬಿಗೆ ಅವರು 18ನೇ ಅಧ್ಯಕ್ಷರಾಗಿದ್ದಾರೆ.