Wednesday, October 7, 2026

BDA Apartments

immense respect BDA JK_Adv BDA Adv
Home Front Page ಮೈಸೂರು ವಿವಿ ಮಾನಸ ಗಂಗೋತ್ರಿ ಆವರಣಕ್ಕೆ‌ ಖಾಸಗಿ ವಾಹನಗಳ ಪ್ರವೇಶಕ್ಕೆ ನಿರ್ಬಂಧ….

ಮೈಸೂರು ವಿವಿ ಮಾನಸ ಗಂಗೋತ್ರಿ ಆವರಣಕ್ಕೆ‌ ಖಾಸಗಿ ವಾಹನಗಳ ಪ್ರವೇಶಕ್ಕೆ ನಿರ್ಬಂಧ….

ಮೈಸೂರು,ಫೆ,4,2020(www.justkannada.in): ಪರಿಸರ ಸಂರಕ್ಷಣೆ ವಿವಿಯ ಭದ್ರತೆ ದೃಷ್ಟಿಯಿಂದ  ಮೈಸೂರು ವಿವಿ ಮಾನಸ ಗಂಗೋತ್ರಿ ಆವರಣಕ್ಕೆ‌ ಖಾಸಗಿ ವಾಹನಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.

ಮಾನಸ ಗಂಗೋತ್ರಿ ಪರಿಸರ ಸಂರಕ್ಷಣೆ ವಿವಿಯ ಭದ್ರತೆ ದೃಷ್ಟಿಯಿಂದ ಪ್ರಾಯೋಗಿಕವಾಗಿ ವಾಹನ ಸಂಚಾರ ನಿಷೇಧ ಹೇರಲಾಗಿದೆ.  ಸಾರ್ವಜನಿಕ ಸಂಚಾರಕ್ಕೆ ಮಾತ್ರ ಬ್ರೇಕ್ ಹಾಕಲಾಗಿದ್ದು, ಸದ್ಯ ವಿದ್ಯಾರ್ಥಿಗಳ ವಾಹನಕ್ಕೆ ನಿರ್ಬಂಧ ಇಲ್ಲ. ಗಂಗೋತ್ರಿ ಆವರಣಕ್ಕೆ ಕಾರು ಆಟೋಗಳ ಸಂಚಾರ ಬಂದ್ ಮಾಡಿದ್ದು,  ಮುಂದಿನ ದಿನಗಳಲ್ಲಿ ದ್ವಿಚಕ್ರ ವಾಹನ ಸಂಚಾರ ನಿರ್ಬಂಧಕ್ಕೂ ಮೈಸೂರು ವಿವಿ ಚಿಂತನೆ ನಡೆಸಿದೆ.

. ಮಾನಸ ಗಂಗೋತ್ರಿ ಬಳಿ ಭದ್ರತಾ ಸಿಬ್ಬಂದಿ ನಿಯೋಜನೆ ಮಾಡಲಾಗಿದ್ದು , ಸಿಬ್ಬಂದಿಯು ವಾಹನ ತಪಾಸಣೆ ಮಾಡಿ ವಿದ್ಯಾರ್ಥಿಗಳನ್ನು ಒಳ ಬಿಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಬ್ಯಾಟರಿ ಚಾಲಿತ ವಾಹನಗಳ ವ್ಯವಸ್ಥೆ, ಪರಿಸರ ಸ್ನೇಹಿ ಇ – ಕಾರ್ಟ್ ವಾಹನ ಸೌಲಭ್ಯ ಕಲ್ಪಿಸಲಾಗುತ್ತದೆ.

Key words: Restriction -private vehicles- access –mysore university- Manasa Gangotri