Wednesday, August 26, 2026

BDA Apartments

Home Crime ಸುಳ್ ಸುದ್ಧಿ ಪ್ರಕಟಿಸಿದ ಕನ್ನಡ ಮಾಧ್ಯಮಗಳಿಗೆ 73 ಲಕ್ಷ ರೂ ‘ದಂಡ’ನೆ ವಿಧಿಸಿದ ಹೈಕೋರ್ಟ್..

ಸುಳ್ ಸುದ್ಧಿ ಪ್ರಕಟಿಸಿದ ಕನ್ನಡ ಮಾಧ್ಯಮಗಳಿಗೆ 73 ಲಕ್ಷ ರೂ ‘ದಂಡ’ನೆ ವಿಧಿಸಿದ ಹೈಕೋರ್ಟ್..

 

ಬೆಂಗಳೂರು, ಜ.29, 2020 : (www.justkannada.in news )  ಸುಳ್ ಸುದ್ಧಿ ಪ್ರಕಟಿಸಿದ್ದಕ್ಕಾಗಿ ಕರ್ನಾಟಕ ರಾಜ್ಯ  ಹೈಕೋರ್ಟ್ ಮಂಗಳವಾರ ವಿವಿಧ ಮಾಧ್ಯಮಗಳಿಗೆ ಬರೋಬ್ಬರಿ 73 ಲಕ್ಷ ರೂ. ದಂಡ ವಿಧಿಸಿದೆ.

ಇಂಗ್ಲಿಷ್ ದಿನಪತ್ರಿಕೆ ಡೆಕ್ಕನ್ ಹೆರಾಲ್ಡ್  ಮತ್ತು  ಕನ್ನಡ ಟೆಲಿವಿಷನ್ ನ್ಯೂಸ್ ಚಾನೆಲ್‌ಗಳಾದ ಬಿ-ಟಿವಿ, ಟಿವಿ-5 ಹಾಗೂ ದಿಗ್ವಿಜಯ ಚಾನಲ್ ಗಳೇ ಹೈಕೋರ್ಟ್ ‘ದಂಡ’ನೆಗೆ ಗುರಿಯಾದ ಮೀಡಿಯಾ ಹೌಸ್.

ಒಟ್ಟು ರೂ. 73 ಲಕ್ಷ ದಂಡದ ಜತೆಗೆ, . ಸುಳ್ಳು ಸುದ್ದಿ ವರದಿಯನ್ನು ಪ್ರಕಟಿಸಿದ್ದಕ್ಕಾಗಿ ಮತ್ತು ಪ್ರಸಾರ ಮಾಡಿದ್ದಕ್ಕಾಗಿ ಬೇಷರತ್ತಾಗಿ ಕ್ಷಮೆಯಾಚನೆಯನ್ನು ಮಾಡಬೇಕೆಂದು ಕೋರ್ಟ್ ಹೇಳಿದೆ.

ಏನಿದು ಘಟನೆ:

KARNATAKA HIGH COURT - ORDERS-  4 MEDIA HOUSES- PAY RS 73 LAKHS- false.news-penalty

ಕಳೆದ ಡಿ. 16 ರಂದು  “ನ್ಯಾಯಾಧೀಶರ ಮೇಲೆ ನಡೆದ ದಾಳಿಯಲ್ಲಿ ರೂ. 9 ಕೋಟಿ ವಶ ” ಎಂದು ಈ ಸುದ್ದಿ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿತ್ತು.
ಇದನ್ನು ಗಮನಿಸಿದ ಕೋರ್ಟ್ ಕ್ರಮಕ್ಕೆ ಮುಂದಾಯಿತು. ನ್ಯಾಯಾಧೀಶರ ಬಗ್ಗೆ ಸುಳ್ಳು ಸುದ್ದಿ ಪ್ರಕಟಿಸಿರುವ ಕಾರಣ, ಈ ಮಾಧ್ಯಮಗಳ ವಿರುದ್ಧ  1971ರ ಕಂಟೆಂಪ್ಟ್ ಆಫ್ ಕೋರ್ಟ್ ಆ್ಯಕ್ಟ್ ಅಡಿಯಲ್ಲಿ ತಪ್ಪಿತಸ್ಥರು ಎಂದು ಗುರುತಿಸಲಾಯಿತು.
ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಹೇಮಂತ್ ಚಂದಂಗೌಡರ್ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠವು ಈ ಆದೇಶವನ್ನು ಹೊರಡಿಸಿದೆ.

ಯಾವುದೇ ವರದಿಗಳು, ಯಾವುದೇ ಮೂಲ ಮತ್ತು ಪರಿಶೀಲನೆ ಇಲ್ಲದೆ ಈ ಸುದ್ದಿಯನ್ನು ಪ್ರಕಟಿಸಿದ್ದಾಗಿ ಮಾಧ್ಯಮ ಸಂಸ್ಥೆಗಳು ಒಪ್ಪಿಕೊಂಡಿವೆ. ಸುಳ್ಳು ಸುದ್ದಿ ಪ್ರಕಟಣೆಯಿಂದಾಗಿ ನ್ಯಾಯಾಂಗಕ್ಕೆ ಆಗಿರುವ ಹಾನಿಗೆ ನ್ಯಾಯಾಲಯದ ನಿರ್ದೇಶನದಂತೆ ದಂಡ ಕಟ್ಟಲು ಈ ಮಾಧ್ಯಮ ಸಂಸ್ಥೆಗಳು ಒಪ್ಪಿಕೊಂಡಿವೆ ಎನ್ನಲಾಗಿದೆ.

ಈ ಸುಳ್ಳು ವರದಿಯನ್ನು ಪ್ರಕಟಿಸಿದ ಡೆಕ್ಕನ್ ಹೆರಾಲ್ಡ್ ಇಂಗ್ಲಿಷ್ ದಿನಪತ್ರಿಕೆ, ಬೇಷರತ್ತಾದ ಕ್ಷಮೆಯಾಚಿಸುವುದರ ಜೊತೆಗೆ ರೂ.30 ಲಕ್ಷವನ್ನು ದಂಡವಾಗಿ ಪಾವತಿಸಲು ಒಪ್ಪಿಕೊಂಡಿದೆ.

ಕನ್ನಡದ ನ್ಯೂಸ್ ಚಾನಲ್ ಗಳಾದ  BTV ಚಾನೆಲ್‌ಗೆ ರೂ. 20 ಲಕ್ಷ ದಂಡ,  TV5 ಗೆ ರೂ. 8 ಲಕ್ಷ ಮತ್ತು ದಿಗ್ವಿಜಯ ಟಿವಿಗೆ ರೂ. 15 ಲಕ್ಷ ದಂಡ ಪಾವತಿಸುವಂತೆ ಸೂಚನೆಯನ್ನು ನೀಡಲಾಗಿದೆ.

key words : KARNATAKA HIGH COURT – ORDERS-  4 MEDIA HOUSES- PAY RS 73 LAKHS- false.news-penalty

 

ENGLISH SUMMARY :

PAY RS 73 LAKHS : KARNATAKA HIGH COURT ORDERS 4 MEDIA HOUSES FOR PUBLISHIHG/  TELECASTING FALSE NEWS

Karnataka high court imposed a total cost of ₹73 lakh on an English daily newspaper & three Kannada television news channels  on Tuesday.  To accept their unconditional apology for publishing & telecasting a false news report under the headline “₹9 crore seized in raid on judge” on Dec 16, 2019.

KARNATAKA HIGH COURT - ORDERS-  4 MEDIA HOUSES- PAY RS 73 LAKHS- false.news-penalty

Chief Justice Abhay  Oka and Justice Hemant Chandangoudar’ s comprising  Division Bench passed the above order . while dropping the contempt of court proceedings by showing “leniency & mercy” on the media houses as per the Supreme court’s judgments by accepting their apology.