Thursday, August 27, 2026

BDA Apartments

Home Front Page ಬೈ ಎಲೆಕ್ಷನ್ ನಲ್ಲಿ ಸೋತವರಿಗೂ ಸಚಿವ ಸ್ಥಾನ ನೀಡಬೇಕು- ಶಾಸಕ ಕೆಸಿ ನಾರಾಯಣಗೌಡ ಆಗ್ರಹ….

ಬೈ ಎಲೆಕ್ಷನ್ ನಲ್ಲಿ ಸೋತವರಿಗೂ ಸಚಿವ ಸ್ಥಾನ ನೀಡಬೇಕು- ಶಾಸಕ ಕೆಸಿ ನಾರಾಯಣಗೌಡ ಆಗ್ರಹ….

ಬೆಂಗಳೂರು,ಜ,29,2020(www.justkannada.in):  ಉಪಚುನಾವಣೆಯಲ್ಲಿ ಸೋತವರಿಗೂ ಸಚಿವ ಸ್ಥಾನ ನೀಡಬೇಕು ಎಂದು ಕೆ.ಆರ್ ಪೇಟೆ ಶಾಸಕ ಕೆ.ಸಿ ನಾರಾಯಣಗೌಡ ಆಗ್ರಹಿಸಿದರು.

ವಿಧಾನಸೌಧಲ್ಲಿ ಇಂದು ಮಾತನಾಡಿದ ಶಾಸಕ ಕೆ.ಸಿ ನಾರಾಯಣಗೌಡ, ಸಚಿವ ಸಂಪುಟ ವಿಸ್ತರಣೆ ವಿಳಂಬಕ್ಕೆ ನಮಗೆ ಬೇಸರವಿಲ್ಲ. ನಾಳೆ ಸಿಎಂ ಬಿಎಸ್ ಯಡಿಯೂರಪ್ಪ ದೆಹಲಿಗೆ ಹೋಗಲಿದ್ದಾರೆ. ಸಂಪುಟ ವಿಸ್ತರಣೆ ಬಗ್ಗೆ  ಹೈಕಮಾಂಡ್ ಜತೆ ಚರ್ಚೆ ಮಾಡಲಿದ್ದಾರೆ. ಹೀಗಾಗಿ ಶೀಘ್ರದಲ್ಲೇ ಸಂಪುಟ ವಿಸ್ತರಣೆಯಾಗಲಿದೆ ಎಂದು ತಿಳಿಸಿದರು.

ಸೋತವರಿಗೂ ಸಚಿವ ಸ್ಥಾನ ವಿಚಾರ ಕುರಿತು ಪ್ರತಿಕ್ರಿಯಿಸಿದ ನಾರಾಯಣಗೌಡ,  ಉಪಚುನಾವಣೆಯಲ್ಲಿ ಸೋಲನುಭವಿಸಿರುವ ಶಾಸಕರನ್ನೂ ಸೇರಿ ಎಲ್ಲಾ 17 ಶಾಸಕರಿಗೂ ಸಚಿವ ಸ್ಥಾನ ನೀಡಬೇಕು. ನಾವೆಲ್ಲರೂ ಒಟ್ಟಾಗಿಯೇ ಇದ್ದೇವೆ. ಹೀಗಾಗಿ ಸಿಎಂ ಬಿಎಸ್ ಯಡಿಯೂರಪ್ಪ ಕೊಟ್ಟ ಮಾತನ್ನ ಉಳಿಸಿಕೊಳ್ಳುವ ವಿಶ್ವಾಸವಿದೆ ಎಂದು ಕೆ.ಸಿ ನಾರಾಯಣಗೌಡ ತಿಳಿಸಿದ್ದಾರೆ.

Key words: by-election- losers –minister position-MLA- KC Narayana Gowda