Friday, August 14, 2026

BDA Apartments

Home Front Page ಮೂಲ ಮತ್ತು ವಲಸಿಗರು ಅಂತೇನು ಇಲ್ಲ: ನಮ್ಮ ಪಕ್ಷಕ್ಕೆ ಬಂದ ಮೇಲೆ ಎಲ್ಲರೂ ಬಿಜೆಪಿಯವರೇ- ಡಿಸಿಎಂ...

ಮೂಲ ಮತ್ತು ವಲಸಿಗರು ಅಂತೇನು ಇಲ್ಲ: ನಮ್ಮ ಪಕ್ಷಕ್ಕೆ ಬಂದ ಮೇಲೆ ಎಲ್ಲರೂ ಬಿಜೆಪಿಯವರೇ- ಡಿಸಿಎಂ ಅಶ್ವಥ್ ನಾರಾಯಣ್…

ಬೆಂಗಳೂರು,ಜ,29,2020(www.justkannada.in):   ನಮ್ಮ ಪಕ್ಷದಲ್ಲಿ ಮೂಲ ಬಿಜೆಪಿಗರು ವಲಸಿಗರು ಅಂತೇನು ಇಲ್ಲ ನಮ್ಮ ಪಕ್ಷಕ್ಕೆ ಬಂದ ಮೇಳೆ ಎಲ್ಲರೂ ಬಿಜೆಪಿಯವರೇ ಆಗ್ತಾರೆ ಎಂದು ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ತಿಳಿಸಿದರು.

ಸಚಿವ ಸಂಪುಟ ವಿಸ್ತರಣೆ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಣ್, ಸಂಪುಟ ವಿಸ್ತರಣೆ ಸಿಎಂ ವಿವೇಚನೆಗೆ ಬಿಟ್ಟ ವಿಚಾರ. ನಮ್ಮ ಪಕ್ಷದಲ್ಲಿ ಮೂಲ ಬಿಜೆಪಿಗರು ವಲಸಿಗರು ಎಂಬುದಿಲ್ಲ. ನಮ್ಮ ಪಕ್ಷಕ್ಕೆ ಬಂದ ಮೇಲೆ ಎಲ್ಲರೂ ಬಿಜೆಪಿಯವರೇ ಆಗ್ತಾರೆ. ಸಿಎಂ ಬಿಎಸ್ ಯಡಿಯೂರಪ್ಪ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡುತ್ತಾರೆ. ಅದಷ್ಟು ಬೇಗ ಸಂಪುಟ ವಿಸ್ತರಣೆ ಮಾಡುತ್ತಾರೆ ಎಂದರು.

 

Key words: No matter -origin – immigrants-BJP-DCM -Ashwath Narayan …