ಪೊಚೆಫ್ಸ್ಟ್ರೂಮ್, ದಕ್ಷಿಣ ಆಫ್ರಿಕಾ, ಜನವರಿ 29, 2019 (www.justkannada.in): ಸೆನವ್ಸ್ ಪಾರ್ಕ್ ಸ್ಟೇಡಿಯಂನಲ್ಲಿ ನಿನ್ನೆ ನಡೆದ ಅಂಡರ್ 19 ವರ್ಲ್ಡ್ಕಪ್ನ ಮೊದಲ ಕ್ವಾರ್ಟರ್ ಫೈನಲ್ಸ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಗೆದ್ದು ಬೀಗಿದೆ. ಈ ಮೂಲಕ ಭಾರತ, ಸೆಮಿ ಫೈನಲ್ಗೆ ಲಗ್ಗೆ ಇಟ್ಟಿದೆ.
ಟೀಂ ಇಂಡಿಯಾ 9 ವಿಕೆಟ್ ನಷ್ಟಕ್ಕೆ 50 ಓವರ್ಗಳಲ್ಲಿ 233 ರನ್ ಕಲೆ ಹಾಕಿದ್ರೆ, ಆಸ್ಟ್ರೇಲಿಯಾ 43.3 ಓವರ್ಗಳಲ್ಲಿ 159 ರನ್ಗಳಿಗೆ ತನ್ನೆಲ್ಲಾ ವಿಕೆಟ್ಗಳನ್ನ ಕೈಚೆಲ್ಲಿ ಭಾರತದೆದುರು ಮಂಡಿಯೂರಿತು.
ಟೀಂ ಇಂಡಿಯಾದ ಯಶಸ್ವಿ ಜೈಸ್ವಾಲ್ 62 ರನ್ ಸಿಡಿಸಿದ್ರೆ, ಅಥರ್ವ ಅಂಕೋಲೆಕರ್ 55 ರನ್ ಗಳಿಸಿದ್ರು. ಯುವ ವೇಗಿ ಕಾರ್ತಿಕ್ ತ್ಯಾಗಿ 4 ವಿಕೆಟ್ಗಳನ್ನ ಪಡೆಯುವ ಮೂಲಕ 74 ರನ್ಗಳ ಅಂತರದಿಂದ ಪಂದ್ಯ ಗೆಲ್ಲಲು ನೆರವಾದರು.






