Monday, August 3, 2026

BDA Apartments

Home Front Page ಮಂಗಳೂರು ಏರ್ ಪೋರ್ಟ್ ನಲ್ಲಿ ಬಾಂಬ್ ಪತ್ತೆ ಪ್ರಕರಣ: ಘಟನೆಗೆ ಕಾರಣರಾದ ಶಕ್ತಿಗಳನ್ನ ಮಟ್ಟ ಹಾಕಲಾಗುತ್ತೆ...

ಮಂಗಳೂರು ಏರ್ ಪೋರ್ಟ್ ನಲ್ಲಿ ಬಾಂಬ್ ಪತ್ತೆ ಪ್ರಕರಣ: ಘಟನೆಗೆ ಕಾರಣರಾದ ಶಕ್ತಿಗಳನ್ನ ಮಟ್ಟ ಹಾಕಲಾಗುತ್ತೆ –ಸಿಎಂ ಬಿಎಸ್ ಯಡಿಯೂರಪ್ಪ ಟ್ವೀಟ್….

ಬೆಂಗಳೂರು,ಜ,21,2020(www.justkannada.in):  ವಿದೇಶ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಯಡಿಯೂರಪ್ಪ ಮಂಗಳೂರು ಏರ್ ಪೋರ್ಟ್ ನಲ್ಲಿ ಬಾಂಬ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಟ್ ಮಾಡಿದ್ದಾರೆ.

ಮಂಗಳೂರು ಏರ್ ಪೋರ್ಟ್ ನಲ್ಲಿ ಬಾಂಬ್ ಪತ್ತೆಯಾಗಿರುವುದು ದುರದೃಷ್ಟಕರ. ಈ ಘಟನೆಗೆ ಕಾರಣರಾದ ಶಕ್ತಿಯನ್ನ ಮಟ್ಟಹಾಕಲಾಗುತ್ತದೆ ಭದ್ರತೆಗೆ ಭಂಗ ತರುವ ಚಟುವಟಿಕೆಯನ್ನ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಈ ಕುರಿತು ನಾಗರೀಕರು ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಟ್ವಿಟ್ ಮಾಡಿದ್ದಾರೆ.

ಸಿಎಂ ಬಿಎಸ್ ಯಡಿಯೂರಪ್ಪ ದಾವೋಸ್ ಗೆ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ನಿನ್ನೆ ಮಂಗಳೂರು ಏರ್ ಪೋರ್ಟ್ ನಲ್ಲಿ ಬಾಂಬ್ ಪತ್ತೆಯಾಗಿ ಸಾಕಷ್ಟು ಆತಂಕವನ್ನುಂಟು ಮಾಡಿತ್ತು. ಪತ್ತೆಯಾಗಿದ್ದ ಬಾಂಬ್ ಅನ್ನ ಕೆಂಜಾರು ಮೈದಾನದಲ್ಲಿ ನಿರ್ಜನ ಪ್ರದೇಶದಲ್ಲಿ ಬಾಂಬ್ ನಿಷ್ಕ್ರಿಯಾ ದಳ  ಸುರಕ್ಷಿತವಾಗಿ ಸ್ಪೋಟಿಸಿತ್ತು.

Key words: Bomb detection- case -Mangalore airport-  CM BS Yeddyurappa –Tweet.