Tuesday, September 29, 2026

BDA Apartments

ಜೂಲನ್‌ ಗೋಸ್ವಾಮಿ ಆಗಿ ಸ್ಟೇಡಿಯಂನಲ್ಲಿ ಸಿಕ್ಸರ್ ಭಾರಿಸಲಿದ್ದಾರೆ ಅನುಷ್ಕಾ...
Home Cinema ಜೂಲನ್‌ ಗೋಸ್ವಾಮಿ ಆಗಿ ಸ್ಟೇಡಿಯಂನಲ್ಲಿ ಸಿಕ್ಸರ್ ಭಾರಿಸಲಿದ್ದಾರೆ ಅನುಷ್ಕಾ!

ಜೂಲನ್‌ ಗೋಸ್ವಾಮಿ ಆಗಿ ಸ್ಟೇಡಿಯಂನಲ್ಲಿ ಸಿಕ್ಸರ್ ಭಾರಿಸಲಿದ್ದಾರೆ ಅನುಷ್ಕಾ!

ಬೆಂಗಳೂರು, ಜನವರಿ 21, 2019 (www.justkannada.in): ಭಾರತೀಯ ಮಹಿಳಾ ಕ್ರಿಕೆಟ್‌ ತಂಡದ ನಾಯಕಿಯಾಗಿದ್ದ ಜೂಲನ್‌ ಗೋಸ್ವಾಮಿ ಅವರ ಬಯೋಪಿಕ್‌ ಅನ್ನು ತೆರೆ ಮೇಲೆ ತರಲು ಸಿದ್ಧತೆ ನಡೆಸಿದೆ.

ಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರ ಮನ ಗೆದ್ದಿರುವ ನಟಿ ಅನುಷ್ಕಾ ಶರ್ಮಾ ತಮ್ಮ ಮುಂದಿನ ಚಿತ್ರದಲ್ಲಿ ಕ್ರಿಕೆಟ್‌ ಆಟಗಾರ್ತಿಯಾಗಿ ಮಿಂಚಲಿದ್ದಾರೆ. ಜೂಲನ್‌ ಪಾತ್ರವನ್ನು ಅನುಷ್ಕಾ ನಿರ್ವಹಿಸಲಿದ್ದಾರೆ.

ಈಗಾಗಲೇ ಚಿತ್ರದ ಚಿತ್ರೀಕರಣ ಕೂಡ ಆರಂಭವಾಗಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಅನೂಷ್ಕಾ ಹಾಗೂ ಜೂಲನ್‌ ಕ್ರಿಕೆಟ್‌ ಮೈದಾನದಲ್ಲಿ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.