Friday, August 14, 2026

BDA Apartments

Home Cinema ಫೆ.2ಕ್ಕೆ ನಟ ಚೇತನ್-ಮೇಘಾ ಮದುವೆ

ಫೆ.2ಕ್ಕೆ ನಟ ಚೇತನ್-ಮೇಘಾ ಮದುವೆ

ಬೆಂಗಳೂರು, ಜನವರಿ 21, 2019 (www.justkannada.in): ನಟ ಚೇತನ್ ಮತ್ತು ಮೇಘಾ ಅವರ ಮದುವೆ ಫೆಬ್ರವರಿ 2 ರಂದು ನಡೆಯಲಿದೆ.

ವಲ್ಲಭ್ ನಿಕೇತನ ವಿನೋಬಾ ಭಾವೆ ಆಶ್ರಮದಲ್ಲಿ ಫೆಬ್ರವರಿ 2 ರಂದು ಸಂಜೆ 6 ಗಂಟೆಗೆ ಅನಾಥಾಶ್ರಮದ ಮಕ್ಕಳು ಮತ್ತು ವೃದ್ಧರ ಸಮ್ಮುಖದಲ್ಲಿ ಚೇತನ್ -ಮೇಘಾ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಮದುವೆ ಅಂಗವಾಗಿ ವಚನ ಗಾಯನ, ಸೂಫಿ ಗಾಯನ, ಕೊರಗ ನೃತ್ಯ, ಲಂಬಾಣಿ ನೃತ್ಯ, ಸಿದ್ಧಿ ನೃತ್ಯ ಮತ್ತು ಪುಸ್ತಕ ಪ್ರದರ್ಶನ ಏರ್ಪಡಿಸಲಾಗಿದೆ. ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದಿರುವ ಚೇತನ್ ಸಿನಿಮಾ ಮಾತ್ರವಲ್ಲದೇ, ಸಾಮಾಜಿಕ ಹೋರಾಟಗಳಿಂದಲೂ ಗುರುತಿಸಿಕೊಂಡಿದ್ದಾರೆ.