Thursday, August 13, 2026

BDA Apartments

Home Cinema ತಾಯಿ ಕಳೆದುಕೊಂಡ ಅಭಿಮಾನಿಗೆ ಸಾಂತ್ವನ ಹೇಳಿದ ಶಿವಣ್ಣ

ತಾಯಿ ಕಳೆದುಕೊಂಡ ಅಭಿಮಾನಿಗೆ ಸಾಂತ್ವನ ಹೇಳಿದ ಶಿವಣ್ಣ

ಬೆಂಗಳೂರು, ಜನವರಿ 21, 2019 (www.justkannada.in): ನಟ ಶಿವರಾಜ್​ಕುಮಾರ್ ಹಾಗೂ ನಟ ದುನಿಯಾ ವಿಜಯ್ ಇಬ್ಬರೂ ತಮ್ಮ ಅಭಿಮಾನಿ ಮನೆಗೆ ಭೇಟಿ ನೀಡಿ ಅವರಿಗೆ ಧೈರ್ಯ ತುಂಬಿದ್ದಾರೆ.

ಶಿವಣ್ಣನ ಅಭಿಮಾನಿ ಪುನೀತ್ ಎಂಬುವವರ ತಾಯಿ ಸರೋಜಮ್ಮ ಇಂದು ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ವಿಷಯ ತಿಳಿದ ಶಿವಣ್ಣ ಕೂಡಲೇ ಎಲ್ಲಾ ಕೆಲಸಗಳನ್ನು ಬದಿಗೊತ್ತಿ ಅಭಿಮಾನಿಯ ಮನೆಗೆ ಭೇಟಿ ನೀಡಿದ್ದಾರೆ.

ಪುನೀತ್ ಅವರ ಗವಿಪುರಂ ಗುಟ್ಟಳಿ ನಿವಾಸಕ್ಕೆ ತೆರಳಿದ ಶಿವಣ್ಣ ಹಾಗೂ ವಿಜಯ್ ಸರೋಜಮ್ಮ ಅವರ ಅಂತಿಮ ದರ್ಶನ ಪಡೆದು ಪುನೀತ್​​​ಗೆ ಸಾಂತ್ವನ ಹೇಳಿದ್ದಾರೆ.