Friday, August 14, 2026

BDA Apartments

Home Cinema ಸೂಪರ್ ಸ್ಟಾರ್ ರಜನಿ ವಿರುದ್ಧ ದೂರು ದಾಖಲು…

ಸೂಪರ್ ಸ್ಟಾರ್ ರಜನಿ ವಿರುದ್ಧ ದೂರು ದಾಖಲು…

ಚೆನ್ನೈ, ಜನವರಿ 20, 2019 (www.justkannada.in): ಸೂಪರ್ಸ್ಟಾರ್ ರಜನಿಕಾಂತ್ ವಿರುದ್ಧ ದೂರು ದಾಖಲಿಸಲಾಗಿದೆ.

ಸಮಾಜ ಪರಿವರ್ತಕ ಪೆರಿಯಾರ್ ರಾಮಸ್ವಾಮಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಹಿನ್ನಲೆ ಹಾಗೂ ಸಮಾಜಕ್ಕೆ ತಪ್ಪು ಸಂದೇಶ ರವಾನಿಸಿರುವ ಆರೋಪದಡಿ ರಜನಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ತಮಿಳು ನಿಯತಕಾಲಿಕೆಯ 50ನೇ ವಾರ್ಷಿಕೋತ್ಸವದಲ್ಲಿ ಭಾಗವಹಿಸಿದ್ದ ರಜನಿಕಾಂತ್, ಪೆರಿಯಾರ್ ನೇತೃತ್ವದಲ್ಲಿ 1971ರಲ್ಲಿ ಮೌಢ್ಯತೆಯ ನಿರ್ಮೂಲನೆಗೆ ಸಾಕಷ್ಟು ಪ್ರಯತ್ನ ಪಟ್ಟಿದ್ದರು.

ಇದಕ್ಕಾಗಿ ನಡೆದ ಮೆರವಣಿಗೆಯಲ್ಲಿ ಸೀತೆ ಮತ್ತು ಶ್ರೀರಾಮನ ಬೆತ್ತಲೆ ಫೋಟೋಗಳನ್ನು ಪ್ರದರ್ಶಿಸಿದ್ದರು. ಆ ಫೋಟೋಗಳಿಗೆ ಚಪ್ಪಲಿಗಳ ಹಾರ ಹಾಕಿ ಮೆರವಣಿಗೆ ನಡೆಸಿದ್ದರು ಎಂದು ರಜನಿಕಾಂತ್‌ ಹೇಳಿದ್ದರು. ಇದು ತಮಿಳುನಾಡಿನಲ್ಲಿ ಹೊಸ ವಿವಾದಕ್ಕೆ ಕಾರಣವಾಗಿದೆ.