Saturday, August 15, 2026

BDA Apartments

Home Cinema ಪೂಜಾ ಹೆಗ್ಡೆ ಭೇಟಿಗೆ ಐದು ದಿನ ಫುಟ್’ಪಾತ್ ಮೇಲೆ ಕಾಲ ಕಳೆದ ‘ಹುಚ್ಚು’ ಅಭಿಮಾನಿ

ಪೂಜಾ ಹೆಗ್ಡೆ ಭೇಟಿಗೆ ಐದು ದಿನ ಫುಟ್’ಪಾತ್ ಮೇಲೆ ಕಾಲ ಕಳೆದ ‘ಹುಚ್ಚು’ ಅಭಿಮಾನಿ

ಬೆಂಗಳೂರು, ಜನವರಿ 17, 2019 (www.justkannada.in): ಅಭಿಮಾನಿಯೊಬ್ಬ ನಟಿ ಪೂಜಾ ಹೆಗ್ಡೆಯನ್ನು ಭೇಟಿಯಾಗುವ ಆಸೆಯಿಂದ ಮುಂಬೈನ ಅವರ ಮನೆ ಮುಂದೆ ಐದು ದಿನಗಳ ಕಾದಿದ್ದಾನೆ.

5 ದಿನ ಫುಟ್‍ಪಾತ್‍ನಲ್ಲಿ ಮಲಗಿದ್ದ ಅಭಿಮಾನಿಯನ್ನು ನಟಿ ಪೂಜಾ ಭೇಟಿ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಒಂದಲ್ಲ ಎರಡಲ್ಲ ಬರೋಬ್ಬರಿ ಐದು ದಿನಗಳ ಕಾಲ ಮುಂಬೈ ರಸ್ತೆಯಲ್ಲೇ ಯುವಕ ಕಳೆದಿದ್ದಾನೆ. ಹೇಗಾದ್ರೂ ಮಾಡಿ ಪೂಜಾ ಹೆಗ್ಡೆಯನ್ನು ಭೇಟಿಯಾಗಬೇಕು ಎಂಬ ಉದ್ದೇಶದಿಂದ ಫುಟ್‍ಪಾತ್ ಮೇಲೆ ಕಾದು ಕುಳಿತಿದ್ದಾನೆ. ಈ ವಿಷಯವನ್ನು ಸ್ವತಃ ಪೂಜಾ ಹೆಗ್ಡೆ ಇನ್‍ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.