Thursday, August 13, 2026

BDA Apartments

Home Cinema ಹುಟ್ಟುಹಬ್ಬಕ್ಕೆ ಹಾರ-ತುರಾಯಿ ಬದಲು, ಧವಸ-ಧಾನ್ಯ ತನ್ನಿ: ಅಭಿಮಾನಿಗಳಿಗೆ ದರ್ಶನ್ ಮನವಿ

ಹುಟ್ಟುಹಬ್ಬಕ್ಕೆ ಹಾರ-ತುರಾಯಿ ಬದಲು, ಧವಸ-ಧಾನ್ಯ ತನ್ನಿ: ಅಭಿಮಾನಿಗಳಿಗೆ ದರ್ಶನ್ ಮನವಿ

ಬೆಂಗಳೂರು, ಜನವರಿ 17, 2019 (www.justkannada.in): ಚಾಲೆಂಜಿಂಗ್ ಸ್ಟಾರ್ ದರ್ಶನ್, ತಮ್ಮ ಜನ್ಮದಿನವನ್ನು ಸರಳವಾಗಿ ಆಚರಿಸಿಕೊಳ್ಳುತ್ತಿದ್ದು, ಈ ಬಾರಿಯೂ ಅದೇ ಸರಳತೆ ದರ್ಶನ್ ಮುಂದುವರೆಸಿದ್ದಾರೆ.

ಫೆಬ್ರವರಿ 16ರಂದು ದರ್ಶನ್ ಹುಟ್ಟು ಹಬ್ಬ ಇರುವುದರಿಂದ ಹಾರ, ತುರಾಯಿ, ಕೇಕ್ ತರುವ ಬದಲು ಅಕ್ಕಿ ಬೇಳೆ, ದವಸ ಧಾನ್ಯ ತರಲು ಡಿ ಬಾಸ್ ಅಭಿಮಾನಿಗಳಿಗೆ ಸೂಚಿಸಿದ್ದಾರೆ.

ಹುಟ್ಟು ಹಬ್ಬದ ನಂತರ ಸಂಗ್ರಹಣೆ ಆದ ಅಕ್ಕಿ, ಧವಸ ಧಾನ್ಯಗಳನ್ನು ಅನಾಥಾಶ್ರಮಗಳಿಗೆ ತಲುಪಿಸುವ ಪ್ಲಾನ್ ಇಟ್ಟುಕೊಳ್ಳಲಾಗಿದೆ. ಈಗಾಗಲೇ ಮೈಸೂರಿನಲ್ಲಿ ದವಸ ಧಾನ್ಯ ಸಂಗ್ರಹಿಸುವ ಕೆಲಸಕ್ಕೆ ದರ್ಶನ್ ಅಭಿಮಾನಿಗಳು ಮುಂದಾಗಿದ್ದಾರೆ.