Wednesday, August 5, 2026

BDA Apartments

Home Crime ಮೈಸೂರು: ಮನೆ ಬೀಗ ಮುರಿದು ನಗದು, ಚಿನ್ನಾಭರಣ ದೋಚಿದ್ದ ಮೂವರು ಕಳ್ಳರು ಅಂದರ್…

ಮೈಸೂರು: ಮನೆ ಬೀಗ ಮುರಿದು ನಗದು, ಚಿನ್ನಾಭರಣ ದೋಚಿದ್ದ ಮೂವರು ಕಳ್ಳರು ಅಂದರ್…

ಮೈಸೂರು,ಜ,14,2020(www.justkannada.in):  ಮನೆಯ ಬೀಗ ಮುರಿದು ನಗದು ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಮೂವರು ಕಳ್ಳರನ್ನ ಮೇಟಗಳ್ಳಿ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಮಧು(21), ಕಿರಣ್(21), ವಿಜಯ್(20) ಬಂಧಿತ ಆರೋಪಿಗಳು.  ಬಂಧಿತರಿಂದ 190 ಗ್ರಾಂ ಚಿನ್ನಾಭರಣ, 150 ಗ್ರಾಂ ಬೆಳ್ಳಿ ವಶಕ್ಕೆ ಪಡೆಯಲಾಗಿದೆ. ಮೂವರು ಆರೋಪಿಗಳ ಪೈಕಿ ವಿಜಯ್ ಹಳೆ ಕಳ್ಳನಾಗಿದ್ದಾನೆ. ವಿಜಯ್  ಮೇಟಗಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳುವು ಮಾಡಿ ಸಿಕ್ಕಿಬಿದ್ದಿದ್ದ.

ಮೇಟಗಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಳಸ್ತವಾಡಿಯಲ್ಲಿ  ಚೆಲುವರಾಜು ಎಂಬುವರ ಮನೆ ಬೀಗ ಮುರಿದು  ಮೂವರು ಕಳ್ಳರು  ಚಿನ್ನಾಭರಣ ನಗದು ದೋಚಿ ಪರಾರಿಯಾಗಿದ್ದರು. ಜನವರಿ 4 ರಂದು ಈ ಘಟನೆ ನಡೆದಿತ್ತು. ಈ ಕುರಿತು ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Key words: Mysore-three robbers –arrest- gold- money