Saturday, August 15, 2026

BDA Apartments

Home Cinema ದರ್ಶನ್’ಗಾಗಿ ಇಂಗ್ಲೆಂಡ್ ನಿಂದ ಬಂದ ಗರ್ಲ್ ಫ್ರೆಂಡ್ !

ದರ್ಶನ್’ಗಾಗಿ ಇಂಗ್ಲೆಂಡ್ ನಿಂದ ಬಂದ ಗರ್ಲ್ ಫ್ರೆಂಡ್ !

ಬೆಂಗಳೂರು, ಜನವರಿ 13, 2019 (www.justkannada.in): ನಟಿ ಮಾನ್ವಿತಾ ಅವರನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಗರ್ಲ್ ಫ್ರೆಂಡ್ ಎಂದಿದ್ದಾರೆ!

‘ಇಂಡಿಯಾ V/S ಇಂಗ್ಲೆಂಡ್’ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಬಂದಿದ್ದ ದರ್ಶನ್ ಚಿತ್ರದ ಟೈಟಲ್ ಅನ್ನು ತಮ್ಮದೇ ಶೈಲಿಯಲ್ಲಿ ವರ್ಣಿಸಿದರು.

ಇಂಡಿಯಾ V/S ಇಂಗ್ಲೆಂಡ್’ ಎನ್ನುವ ಟೈಟಲ್ ತುಂಬ ಚೆನ್ನಾಗಿದೆ. ನಾನು ಅದಕ್ಕೆ ಒಂದು ಟ್ವಿಸ್ಟ್ ಕೊಡುತ್ತೇನೆ. ಸಿನಿಮಾದ ಟೈಟಲ್ ಮುಂದೆ ಮದರ್ ಹಾಕಿದ್ರೆ ನಮ್ ‘ಮದರ್ ಇಂಡಿಯಾ’ ಆಗುತ್ತಾರೆ. ಇಂಗ್ಲೆಂಡ್‌ ಮುಂದೆ ಗರ್ಲ್ ಫ್ರೆಂಡ್ ಹಾಕಿದರೆ, ‘ಗರ್ಲ್ ಫ್ರೆಂಡ್ ಹಾಫ್ ಆಫ್ ಇಂಗ್ಲೆಂಡ್‌’ ಆಗುತ್ತದೆ ಎಂದರು.

ಇನ್ನೂ ಮುಂದೆ ಹೋಗಿ ಮದರ್ ಇಂಡಿಯಾ ನಮ್ಮ ಸುಮ್ಮಮ್ಮ, ಮಾನ್ವಿತಾ ಅವ್ರು ತುಂಬ ಚೆನ್ನಾಗಿ ಕಾಣುತ್ತಿದ್ದಾರೆ ಅವರೇ ಗರ್ಲ್ ಫ್ರೆಂಡ್ ಎಂದರು!