Sunday, September 13, 2026

BDA Apartments

ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆ: ಹುಣಸೂರ ತಾಲೂಕು ವಾರಂಚಿ ಗ್ರಾಮದಲ್ಲಿ...
Home Front Page ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆ: ಹುಣಸೂರ ತಾಲೂಕು ವಾರಂಚಿ ಗ್ರಾಮದಲ್ಲಿ ಬಿಗುವಿನ ವಾತಾವರಣ

ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆ: ಹುಣಸೂರ ತಾಲೂಕು ವಾರಂಚಿ ಗ್ರಾಮದಲ್ಲಿ ಬಿಗುವಿನ ವಾತಾವರಣ

ಮೈಸೂರು, ಜನವರಿ 12, 2019 (www.justkannada.in): ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಯಲ್ಲಿ ಗದ್ದಲ, ಗಲಾಟೆ ನಡೆದಿದೆ.

ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಹೊಸ ವಾರಂಚಿ ಗ್ರಾಮದಲ್ಲಿ ಘಟನೆ ನಡೆದಿದೆ. ರಾತ್ರೋರಾತ್ರಿ ಮತದಾರರ ಪಟ್ಟಿಯಲ್ಲಿ ಹೊಸ ಮತದಾರರ ಸೇರ್ಪಡೆಗೆ ಗ್ರಾಮಸ್ಥರ ಆಕ್ರೋಶವಾಗಿದೆ.

ಚುನಾವಣಾಧಿಕಾರಿ ಯತೀಂದ್ರ ಚುನಾವಣಾ ಅಕ್ರಮಕ್ಕೆ ಬೆಂಬಲ ಕೊಡುತ್ತಿದ್ದಾರೆಂದು ಗ್ರಾಮಸ್ಥರ ಆರೋಪವಾಗಿದೆ. ಭಾನುವಾರ ರಜಾ ದಿನದಲ್ಲಿ ಚುನಾವಣೆ ನಡೆಸುತ್ತಿರುವುದಕ್ಕೂ ಗ್ರಾಮಸ್ಥರ ವಿರೋಧಕ್ಕೆ ಕಾರಣವಾಗದೆ.

ಸ್ಥಳಕ್ಕೆ ಹುಣಸೂರು ಪೊಲೀಸರ ಭೇಟಿ ನೀಡಿ ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದಾರೆ.