Tuesday, September 15, 2026

BDA Apartments

ಮಂಗಳೂರು ಹಿಂಸಾಚಾರ ಕುರಿತು ಹೆಚ್.ಡಿ ಕುಮಾರಸ್ವಾಮಿ ವಿಡಿಯೋ ಬಿಡುಗಡೆ ವಿಚಾರ-...
Home Front Page ಮಂಗಳೂರು ಹಿಂಸಾಚಾರ ಕುರಿತು ಹೆಚ್.ಡಿ ಕುಮಾರಸ್ವಾಮಿ ವಿಡಿಯೋ ಬಿಡುಗಡೆ ವಿಚಾರ- ಪೊಲೀಸ್ ಆಯುಕ್ತ ಡಾ.ಹರ್ಷ ಟಾಂಗ್…

ಮಂಗಳೂರು ಹಿಂಸಾಚಾರ ಕುರಿತು ಹೆಚ್.ಡಿ ಕುಮಾರಸ್ವಾಮಿ ವಿಡಿಯೋ ಬಿಡುಗಡೆ ವಿಚಾರ- ಪೊಲೀಸ್ ಆಯುಕ್ತ ಡಾ.ಹರ್ಷ ಟಾಂಗ್…

ಮಂಗಳೂರು,ಜ,11,2020(www.justkannada.in):  ಸಿಎಎ ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಮೇಲೆಯೇ ದೌರ್ಜನ್ಯ ಆರೋಪ ಹೊರಿಸಿ 35 ವಿಡಿಯೋಗಳನ್ನ ಬಿಡುಗಡೆ ಮಾಡಿದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಮಂಗಳೂರು ಪೊಲೀಸ್ ಕಮಿಷನರ್  ಡಾ.ಹರ್ಷಾ ಟಾಂಗ್ ನೀಡಿದ್ದಾರೆ.

ಪೂರ್ಣ ಪ್ರಮಾಣದ ವಿಡಿಯೋ ನೋಡಿದರೇ ಸತ್ಯಗೊತ್ತಾಗುತ್ತದೆ.  ಬಿಡುಗಡೆ ಮಾಡಿರುವ ವಿಡಿಯೋಗಳು ಯಾವ ಸನ್ನಿವೇಶದಲ್ಲಿ ಆಗಿದೆ ಅನ್ನೋದನ್ನ ತಿಳಿದುಕೊಳ್ಳಬೇಕು ಎಂದು ಮಂಗಳೂರು ಪೊಲೀಸ್ ಕಮಿಷನರ್ ಹರ್ಷ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿರುವ ಪೊಲೀಸ್ ಕಮಿಷನರ್ ಡಾ. ಹರ್ಷ, ಗಲಭೆ ಸಂಬಂಧ ತನಿಖಾ ಸಂಸ್ಥೆಗಳಿಂದ ತನಿಖೆ ನಡೆಯುತ್ತಿದೆ. ಪೊಲೀಸ್ ಇಲಾಖೆಯಿಂದ ಎಲ್ಲಾ ವಿಡಿಯೋಗಳನ್ನ ಸಾಕ್ಷಿಯಾಗಿ ನೀಡಿದ್ದೇವೆ. ಸಮಗ್ರ ಚಿತ್ರಣ ನೋಡಿದರೇ

ಮಂಗಳೂರು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ  ನಿನ್ನೆ 35 ವಿಡಿಯೋಗಳನ್ನ ಬಿಡುಗಡೆ ಮಾಡಿ ಪೊಲೀಸರಿಂದಲೇ ದೌರ್ಜನ್ಯ ನಡೆದಿದೆ. ಅಮಾಯಕರ ಮೇಲೆ, ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಲಾಠಿಚಾರ್ಜ್ ಮಾಡಿದ್ದಾರೆ ಎಂದು ಆರೋಪಿಸಿದ್ದರು.

Key words: HD Kumaraswamy -Video – Mangalore –golibar-Police Commissioner- Dr. Harsha