Monday, August 3, 2026

BDA Apartments

Home Front Page ಕಾರ್ಮಿಕರ ಶ್ರಮಕ್ಕೆ ತಕ್ಕಂತೆ ಸಂಬಳ ಕೊಡಲಿ: ಸೌಲಭ್ಯ ನೀಡಲಿ- ಕಾರ್ಮಿಕರ ಹೋರಾಟಕ್ಕೆ ಬಿಜೆಪಿ ಸಂಸದ ಬಿ.ಎನ್...

ಕಾರ್ಮಿಕರ ಶ್ರಮಕ್ಕೆ ತಕ್ಕಂತೆ ಸಂಬಳ ಕೊಡಲಿ: ಸೌಲಭ್ಯ ನೀಡಲಿ- ಕಾರ್ಮಿಕರ ಹೋರಾಟಕ್ಕೆ ಬಿಜೆಪಿ ಸಂಸದ ಬಿ.ಎನ್ ಬಚ್ಚೇಗೌಡ ಸಹಮತ…

ಚಿಕ್ಕಬಳ್ಳಾಪುರ,ಜ,8,2020(www.justkannada.in):  ಕಾರ್ಮಿಕರ ಶ್ರಮಕ್ಕೆ ತಕ್ಕಂತೆ ಸರ್ಕಾರ ಸಂಬಳ ಕೊಡಲಿ ಸೌಲಭ್ಯ ನೀಡಲಿ ಎಂದು ಚಿಕ್ಕಬಳ್ಳಾಪುರ ಬಿಜೆಪಿ ಸಂಸದ ಬಿ.ಎನ್ ಬಚ್ಚೇಗೌಡ ತಿಳಿಸಿದರು.

ಕೇಂದ್ರದ ಕಾರ್ಮಿಕ ನೀತಿ ವಿರೋಧಿಸಿ ಇಂದು ಕಾರ್ಮಿಕರು ಮುಷ್ಕರ ನಡೆಸಿದ್ದು ಕಾರ್ಮಿಕರ ಹೋರಾಟಕ್ಕೆ ಸಂಸದ ಬಿ.ಎನ್ ಬಚ್ಚೇಗೌಡ ಸಹಮತ ವ್ಯಕ್ತಪಡಿಸಿದ್ದಾರೆ.  ಚಿಕ್ಕಬಳ್ಳಾಪುರದಲ್ಲಿ ಇಂದು ಮಾತನಾಡಿದ ಅವರು,  ಮಗು ಅಳದಿದ್ರೆ ತಾಯಿಯೇ ಹಾಲು ಕೊಡಲ್ಲ. ಅಂತೆಯೇ ಜನ ಕಷ್ಟ ಹೇಳಿಕೊಳ್ಳದಿದ್ರೆ ಸರ್ಕಾರ ಕಣ್ಣು ತೆರೆಯಲ್ಲ.  ಶೇ.50% ಅಸಂಘಟಿತ  ವಲಯದ ಕಾರ್ಮಿಕರಿದ್ದಾರೆ. ಕಷ್ಟದಲ್ಲಿರುವ ಕಾರ್ಮಿಕರ ಕಡೆಗೆ ಸರ್ಕಾರ ಗಮನ ಕೊಡಬೇಕು.  ಕಾರ್ಮಿಕರ ಶ್ರಮಕ್ಕೆ ಸಂಬಳ ಕೊಡುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.

ಅಸಂಘಟಿತ ಕಾರ್ಮಿಕರಿಗೆ ಉದ್ಯೋಗ ಭದ್ರತೆ ಇಲ್ಲ. ಹೀಗಾಗಿ ಕಾರ್ಮಿಕರಿಗೆ ಹಲವು ಸಮಸ್ಯೆಗಳಿವೆ. ಹಾಗಂತ ಹೋರಾಟ ಮಾಡಿ ಅಂತಾ ಹೇಳಲ್ಲ. ಕಾರ್ಮಿಕರಿಗೆ ಸರ್ಕಾರ ಸರಿಯಾದ ವೇತನ ಕೊಡುವ ಕೆಲಸ ಮಾಡಬೇಕು. ಶ್ರಮಕ್ಕೆ ತಕ್ಕ ಸಂಬಳ ನೀಡಲಿ. ಸೌಲಭ್ಯ ಒದಗಿಸಲಿ ಎಂದು ಬಚ್ಚೇಗೌಡ ತಿಳಿಸಿದರು.

Key words: labor-strike- Salary- Facility- BJP MP -BN Batchegowda -chikkaballapur